HomeKarnatakaಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ: ಆಯ ತಪ್ಪಿ ಕೆಳಗೆ ಬಿದ್ದ ಮಹಿಳೆ; ದೇವರಂತೆ ಬಂದು...

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ: ಆಯ ತಪ್ಪಿ ಕೆಳಗೆ ಬಿದ್ದ ಮಹಿಳೆ; ದೇವರಂತೆ ಬಂದು ರಕ್ಷಿಸಿದ ಮಹಿಳಾ ಸಿಬ್ಬಂದಿ

ಉಡುಪಿ: ರೈಲು ಹತ್ತುವಾಗ ಅಥವಾ ಇಳಿಯುವಾಗ ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ. ಕೆಲವರು ಚಲಿಸುತ್ತಿದ್ದ ರೈಲು ಹತ್ತುವ ದುಸ್ಸಾಹಸ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇಲ್ಲೋರ್ವ ಮಹಿಳೆ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ.

ಉಡುಪಿ ರೈಲು ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು ಮಂಗಳೂರು-ವಡಗಾಂವ್ ರೈಲು ಬರುತ್ತಿದ್ದಂತೆ ತಕ್ಷಣ ಓಡಿ ಹೋಗಿ ಹತ್ತಲು ಯತ್ನಿಸಿದ್ದಾರೆ. ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಕ್ಷಣಾರ್ಧದಲ್ಲಿ ಎಚ್ಚೆತ್ತ ಆರ್ ಪಿಎಫ್ ಮಹಿಳಾ ಸಿಬ್ಬಂದಿ ಮಹಿಳೆಯನ್ನು ಪ್ಲಾಟ್ ಫಾರಂ ಮೇಲೆ ಎಳೆದುಕೊಂಡಿದ್ದಾರೆ.

ಸದ್ಯ ಮಹಿಳೆ ಸಣ್ಣಪುಟ್ಟ ಗಾಗಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳಾ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಮಹಿಳೆ ಬಚಾವ್ ಆಗಿದ್ದಾಳೆ. ರೈಲಿನ ವೇಗ ಕಡಿಮೆಯಾಗುವ ಮೊದಲೇ ರೈಲು ನಿಲ್ದಾಣದಲ್ಲಿ ನಿಲ್ಲುವವರೆಗೂ ಕಾಯದೇ ರನ್ನಿಂಗ್ ರೈಲನ್ನೇ ಹತ್ತುವ ದುಸ್ಸಾಹಸ ಮಾಡಿ ಮಹಿಳೆ ಎಡವಟ್ಟು ಮಾಡಿಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular