HomeKarnatakaBREAKING NEWS: ಬಾವಿಯಲ್ಲಿ ರಿಂಗ್ ಅಳವಡಿಸುವಾಗ ದುರಂತ; ಉಸಿರುಗಟ್ಟಿ ಇಬ್ಬರು ದುರ್ಮರಣ

BREAKING NEWS: ಬಾವಿಯಲ್ಲಿ ರಿಂಗ್ ಅಳವಡಿಸುವಾಗ ದುರಂತ; ಉಸಿರುಗಟ್ಟಿ ಇಬ್ಬರು ದುರ್ಮರಣ

ಮಂಗಳೂರು: ಬಾವಿಯೊಳಗೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಪಡಿಬಾಗಿಲುನಲ್ಲಿ ನಡೆದಿದೆ.

ಇಬ್ರಾಹಿಂ (40), ಮಲಾರ್ ನಿವಾಸಿ ಅಲಿ (24) ಮೃತ ದುರ್ದೈವಿಗಳು. 30 ಅಡಿ ಆಳದ ಬಾವಿಗೆ ರಿಂಗ್ ಹಾಕಲು ಇಳಿದಿದ್ದ ವೇಳೆ ಈ ದುರಂತ ಸಂಭವಿಸಿದೆ.

ಬಾವಿಯೊಳಗೆ ಆಕ್ಸಿಜನ್ ಇಲ್ಲದೇ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular