ಚಿಕ್ಕಬಳ್ಳಾಪುರ: ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಇಬ್ಬರು ಕೆರೆಯಲ್ಲಿ ನೀರು ಪಾಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ಸಮೀಪ ನಡೆದಿದೆ.
ರಾಮಸಮುದ್ರ ಕೆರೆಯಲ್ಲಿ ಈಜಲು ಹೋಗಿದ್ದ ಬೆಂಗಳೂರಿನ ಜೆಪಿ ನಗರದ ಗಿರೀಶ್(35), ಕಿಶೋರ್(28) ಮೃತಪಟ್ಟವರು.
ಭಾನುವಾರ ರಜೆ ಹಿನ್ನೆಲೆ ಸ್ನೇಹಿತ ಜಗದೀಶ್ ಅವರ ಸ್ವಗ್ರಾಮ ಗಡಿಮಿಂಚೇನಹಳ್ಳಿಗೆ 7 ಜನ ಸ್ನೇಹಿತರು ಬೆಂಗಳೂರಿನಿಂದ ಬಂದಿದ್ದಾರೆ. ಗ್ರಾಮಕ್ಕೆ ಸಮೀಪದ ಕೆರೆಯಲ್ಲಿ ಈಜಲು ನೀರಿಗೆ ಇಳಿದಿದ್ದಾರೆ. 7 ಜನರ ಪೈಕಿ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

