HomeLatest NewsBIG NEWS: ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು

BIG NEWS: ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು

ಬೀದರ್: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ಗಡಿ ಜಹೀರಾಬಾದ್ ಬಳಿ ನಡೆದಿದೆ.

ಏಜಾಜ್ ಶೇಕ್ ಕಲಿಮೊದ್ದೀನ್ (37) ಮೃತ ಚಾಲಕ. ಬೀದರ್ ನಗರದ ಕಮಲಾನಗರ ನಿವಾಸಿ. ಮತ್ತೋರ್ವ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೈದರಾಬಾದ್ ನಿಂದ ಬೀದರ್ ನ ಕಮಲಾನಗರ ಕಡೆ ಬರುವಾಗ ಲಾರಿಯೊಂದು ಪಂಕ್ಚರ್ ಆಗಿ ರಸ್ತೆ ಬದಿ ನಿಂತಿತ್ತು. ಈ ವೇಳೆ ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular