HomeLatest NewsBIG NEWS: ಬಿಷ್ಣೋಯಿ ಗ್ಯಾಂಗ್ ನ ಶಾರ್ಪ್ ಶೂಟರ್ 'ನವೀನ್ ಕುಮಾರ್' ಎನ್'ಕೌಂಟರ್ ಗೆ ಬಲಿ.!

BIG NEWS: ಬಿಷ್ಣೋಯಿ ಗ್ಯಾಂಗ್ ನ ಶಾರ್ಪ್ ಶೂಟರ್ ‘ನವೀನ್ ಕುಮಾರ್’ ಎನ್’ಕೌಂಟರ್ ಗೆ ಬಲಿ.!

ಹಾಪುರ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ಶಾರ್ಪ್ ಶೂಟರ್ ನವೀನ್ ಕುಮಾರ್ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.

ಉತ್ತರ ಪ್ರದೇಶದ ಕೊತ್ವಾಲಿ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಾರ್ಪ್ ಶೂಟರ್ ನವೀನ್ ಕುಮಾರ್ ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಅಕರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾಚಾರಣೆಯಲ್ಲಿ ಎನ್ ಕೌಂಟರ್ ನಡೆದಿತ್ತು.

ಶಾರ್ಪ್ ಶೂಟರ್ ನವೀನ್ ವಿರುದ್ಧ ದೆಹಲಿ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕೊತ್ವಾಲಿ ಪ್ರದೇಶದಲ್ಲಿ ನವೀನ್ ಹಾಗೂ ಆತನ ಗ್ಯಾಂಗ್ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನವೀನ್ ಗ್ಯಾಂಗ್ ಪೊಲೀಸರ ಮೇಲೆ ದಾಳಿ ನಡೆಸಿದೆ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ಗಾಯಗೊಂದಿದ್ದ ನವೀನ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಮಾರ್ಗಮಧ್ಯೆಯೇ ಆತನ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular