ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸೋಮಲಾಪುರದ ಅಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆಯ ಆಜಂ ಸೊಯೆಲ್, ಮೊಹಮ್ಮದ್ ಶಾಬಾಜ್ ಬಂಧಿತ ಆರೋಪಿಗಳು. ಆಜಂ ಸೊಯೆಲ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಶಾಬಾಜ್ ಲಾರಿ ಮೆಕಾನಿಕ್ ಆಗಿದ್ದಾನೆ. ಆರೋಪಿಗಳು ಅಂಬಾದೇವಿ ದೇವಾಲಯದ ಹಳೆಯ ಯಾತ್ರಿ ನಿವಾಸದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.
ಮಾಹಿತಿ ಆಧರಿಸಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 1.10 ಲಕ್ಷ ರೂ. ಮೌಲ್ಯದ 1.1 ಕೆಜಿ ಗಾಂಜಾ ಮತ್ತು ಗಾಂಜಾ ಇದ್ದ ಕಾಗದದ ಪೊಟ್ಟಣಗಳನ್ನು ವಶಕ್ಕೆ ಪಡೆಯಲಾಗಿದೆ.

