ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಯುವತಿಯೊಬ್ಬಳು ಹಾರಿಸಿಕೊಂಡು ಬಂದ ಕ್ರಿಕೆಟ್ ಚೆಂಡಿಗೆ ಮುತ್ತಿಕ್ಕುವ ಮೂಲಕ ಕ್ರೀಡಾಪ್ರೇಮಿಗಳ ಮನ ಗೆದ್ದಿದ್ದಾಳೆ. ಭಾರತೀಯ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸಿಡಿಸಿದ ಭರ್ಜರಿ ಸಿಕ್ಸರ್ ನೇರವಾಗಿ ಸ್ಟ್ಯಾಂಡ್‌ಗೆ ಬಂದಪ್ಪಳಿಸಿದಾಗ ನಡೆದ ಈ ಅಪರೂಪದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಸ್ಟ್ಯಾಂಡ್‌ಗೆ ಬಂದಪ್ಪಳಿಸಿದ ನಿತೀಶ್ ಶಾಟ್: ಪಂದ್ಯದ ವೇಳೆ ನಿತೀಶ್ ಕುಮಾರ್ ರೆಡ್ಡಿ ಬ್ಯಾಟ್‌ನಿಂದ ಸಿಡಿದ ಚೆಂಡು ಅಬ್ಬರಿಸುತ್ತಾ ಪ್ರೇಕ್ಷಕರು ಕೂತಿದ್ದ ಗ್ಯಾಲರಿಯತ್ತ ತೂರಿಬಂತು. ಚೆಂಡನ್ನು ಹಿಡಿಯಲು ನೆರೆದಿದ್ದ ವೀಕ್ಷಕರ ಪೈಕಿ ಅದೃಷ್ಟಶಾಲಿ ಯುವತಿಯೊಬ್ಬಳ ಕೈಗೆ ಆ ಬಾಲ್ ಸಿಕ್ಕಿದೆ. ಆ ಸಮಯದಲ್ಲಿ ಕೇವಲ ಖುಷಿ ಪಡುವ ಬದಲು, ಆ ಯುವತಿ ಚೆಂಡಿಗೆ ಪ್ರೀತಿಯಿಂದ ಮುತ್ತು ನೀಡುವ ಮೂಲಕ ಕ್ರಿಕೆಟ್ ಮೇಲಿನ ತನ್ನ ಹುಚ್ಚು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ಸಿಕ್ಸರ್ ಬಂದರೆ ಚೆಂಡನ್ನು ಹಿಡಿಯಲು ಎಲ್ಲರೂಸಾ ಸಾಹಸ ಮಾಡುತ್ತಾರೆ, ಸಿಕ್ಕ ಬಾಲ್ ಅನ್ನು ಸ್ಮರಣಿಕೆ ರೀತಿಯಲ್ಲಿ ಮನೆಗೆ ಕೊಂಡೊಯ್ಯುತ್ತಾರೆ. ಆದರೆ ಈ ಯುವತಿ ಚೆಂಡಿಗೆ ಮುತ್ತಿಕ್ಕಿದ ಮುದ್ದಾದ ಭಂಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಪ್ರೇಕ್ಷಕರನ್ನು ಆಕರ್ಷಿಸಿದೆ. ಆಟಗಾರರು ಮೈದಾನದಲ್ಲಿ ಸೆಣಸಾಡುತ್ತಿದ್ದರೆ, ಗ್ಯಾಲರಿಯಲ್ಲಿ ನಡೆದ ಈ ತಮಾಷೆಯ ಘಟನೆ ಪಂದ್ಯದ ಮತ್ತೊಂದು ಹೈಲೈಟ್ ಆಗಿ ಬದಲಾಗಿದೆ.

