HomeKarnatakaಊಟಿ ಮಾದರಿಯಲ್ಲಿ ಪ್ರವಾಸಿ ತಾಣಗಳೂ ಪ್ಲಾಸ್ಟಿಕ್ ಮುಕ್ತ! ಕಸ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಹೊಸ ಅಭಿಯಾನ

ಊಟಿ ಮಾದರಿಯಲ್ಲಿ ಪ್ರವಾಸಿ ತಾಣಗಳೂ ಪ್ಲಾಸ್ಟಿಕ್ ಮುಕ್ತ! ಕಸ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಹೊಸ ಅಭಿಯಾನ

ಶಿವಮೊಗ್ಗ :ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಊಟಿಯ ಮಾದರಿಯಲ್ಲಿ ಪ್ಲಾಸ್ಟಿಕ್ ಮುಕ್ತ ವಲಯವೆಂದು ಘೋಷಿಸಲು ಅನುಕೂಲವಾಗುವಂತೆ ಹಾಗೂ ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಯಂತ್ರಿಸಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಎಲ್ಲಾ ಪ್ರವಾಸಿ ರೆಸಾರ್ಟ್ಗಳೊಂದಿಗೆ ಸೇರಿ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

 ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈವರೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೀಡಿರುವ ಕ್ವಾರಿ ಪರವಾನಗಿಗಳ ವಿವರದ ವರದಿ ನೀಡಬೇಕು. ಜೋಗ ಮತ್ತು ಪಶ್ಚಿಮ ಘಟ್ಟ ಅನುಭವ ಕೇಂದ್ರ ಸ್ಥಾಪಿಸಲು ಸಾಗರ ಶಾಸಕರು ಮತ್ತು ಪ್ರವಾಸೋದ್ಯಮ ಇಲಾಖೆ ಸಮನ್ವಯ ಸಾಧಿಸಿ ಕೈಗೊಂಡ ಕ್ರಮಗಳ ಬಗ್ಗೆ ತ್ವರಿತವಾಗಿ ಲಿಖಿತ ವರದಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

 ಶಿವಮೊಗ್ಗದ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಎಲ್ಲಾ ದರ್ಗಾಗಳಿಗೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಜಿಲ್ಲಾ ವಕ್ಫ್ ಅಧಿಕಾರಿಗೆ ಸೂಚಿಸಿದ ಅವರು, ಹೊಸನಗರ ತಾಲೂಕು ಹೆದ್ದಾರಿಪುರದ ವಿವಾದಿತ ಕೈಗಾರಿಕಾ ಜಮೀನಿನ ಬಗ್ಗೆಯೂ ವಿವರವಾದ ವರದಿ ನೀಡಬೇಕು. ಅಲ್ಲದೇ ವಿವಾದಿತ ಸ್ಥಳದ ಖುದ್ದು ಭೇಟಿಗೆ ದಿನಾಂಕ ನಿಗದಿಪಡಿಸುವಂತೆ ಸಾಗರದ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಸಾಗರ ತಾಲೂಕಿನ ಚೌಡೇಶ್ವರಿ ದೇವಸ್ಥಾನದ ಜಮೀನಿನ ಹಕ್ಕುಪತ್ರ ಬಹಳ ದಿನಗಳಿಂದ ಬಾಕಿ ಇರುವ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಲಾಗಿ, ಅರಣ್ಯ ಇಲಾಖೆ (FC) ಮತ್ತು ವನ್ಯಜೀವಿ ಅನುಮತಿ ಸಿಕ್ಕ ನಂತರ ಹಕ್ಕುಪತ್ರ ವಿತರಿಸುವ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದ ಅವರು. ಅನುಮತಿ ಪ್ರಕ್ರಿಯೆ ಬಗ್ಗೆ ಲಿಖಿತ ವರದಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು. ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಬಾಕಿ ಇರುವ ಕೇಸ್ಗಳ ವಿವರ, ಅರ್ಜಿದಾರರ ಹೆಸರು ಮತ್ತು ಕಾಲಮಿತಿ ಬಗ್ಗೆ ವರದಿ ನೀಡುವಂತೆಯೂ ಮುಜರಾಯಿ ತಹಶೀಲ್ದಾರ್ಗೆ ಸೂಚಿಸಿದರು.

 ತೀರ್ಥಹಳ್ಳಿ ತಾಲೂಕು ಮಲೆಶಂಕರ ದೇವಸ್ಥಾನದ ಆವರಣದಲ್ಲಿ ಭೂಗತ ಕೇಬಲ್ ಅಳವಡಿಸಬೇಕು. ಪಶ್ಚಿಮ ಘಟ್ಟಗಳ ಶ್ರೀಮಂತ ಪರಂಪರೆಯನ್ನು ಬಿಂಬಿಸುವ ವೋಲ್ವೋ ಬಸ್ನಲ್ಲಿ ಸಂಚಾರಿ ವಸ್ತುಸಂಗ್ರಹಾಲಯ (Mobile Museum) ಸ್ಥಾಪನೆ ಮತ್ತು ಪಶ್ಚಿಮಘಟ್ಟ ಗೀತೆ(Anthem)ಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.

ಪಶ್ಚಿಮ ಘಟ್ಟ ಟಾಸ್ಕ್ ಫೋರ್ಸ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಡಿಎಫ್ಒ ಅಜ್ಜಯ್ಯ, ವನ್ಯಜೀವಿ ಡಿಎಫ್ಒ ಪ್ರಸನ್ನ ಪಟಗಾರ್, ಸಾಗರ ಡಿಎಫ್ಒ ಫಯಾಜ್, ಜಿ.ಪಂ. ಉಪಕಾರ್ಯದರ್ಶಿ ಅನ್ನಪೂರ್ಣ, ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಒಟ್ಟಾರೆ, ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ, ಪರಿಸರಸ್ನೇಹಿಯಾಗಿ ಮತ್ತು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ. ಪ್ರವಾಸಿಗರು, ರೆಸಾರ್ಟ್ ಮಾಲೀಕರು ಹಾಗೂ ಸ್ಥಳೀಯರು ಕೈಜೋಡಿಸಿದರೆ ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯವನ್ನು ಕಾಪಾಡುವುದರ ಜೊತೆಗೆ ಮುಂದಿನ ಪೀಳಿಗೆಗೂ ಸ್ವಚ್ಛ ಪರಿಸರವನ್ನು ಉಳಿಸಿಕೊಡಲು ಸಾಧ್ಯವಾಗಲಿದೆ. ಊಟಿಯ ಮಾದರಿಯ ಈ ಪ್ರಯತ್ನ ಶಿವಮೊಗ್ಗದ ಪ್ರವಾಸೋದ್ಯಮಕ್ಕೆ ಹೊಸ ಗುರುತನ್ನು ತಂದುಕೊಡುವ ನಿರೀಕ್ಷೆಯಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular