HomeLatest Newsಬಟ್ಟೆ ಮೇಲಿನ ಅರಿಶಿನದ ಕಲೆಗಳನ್ನು ಈ ವಿಧಾನದಿಂದ ನಿಮಿಷಗಳಲ್ಲಿ ನಿವಾರಿಸಬಹುದು

ಬಟ್ಟೆ ಮೇಲಿನ ಅರಿಶಿನದ ಕಲೆಗಳನ್ನು ಈ ವಿಧಾನದಿಂದ ನಿಮಿಷಗಳಲ್ಲಿ ನಿವಾರಿಸಬಹುದು

ಬಟ್ಟೆಗಳ ಮೇಲೆ ಯಾವುದೇ ಕಲೆ ಬಿದ್ದರೂ ಸುಲಭವಾಗಿ ತೆಗೆಯಬಹುದು. ಆದರೆ ಅರಿಶಿನದ ಕಲೆಗಳನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಬಿಳಿ ಬಟ್ಟೆಗಳಿಗೆ ತಗುಲಿದ ಅರಿಶಿನ ಕಲೆಯನ್ನು ನಿವಾರಿಸುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಈ ಅರಿಶಿನ ಕಲೆಗಳನ್ನು ನಿವಾರಿಸಲು ಈ ವಿಧಾನ ಬಳಸಿ.

ಬಿಳಿ ಬಟ್ಟೆಗಳ ಮೇಲಿರುವ ಅರಿಶಿನದ ಕಲೆಗಳನ್ನು ನಿವಾರಿಸಲು ನಿಂಬೆ ರಸವನ್ನು ಹಚ್ಚಿ ಉಜ್ಜಿ. ನಂತರ ನೀರಿನಿಂದ ತೊಳೆದರೆ ಸ್ವಚ್ಛವಾಗುತ್ತದೆ.
ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸುವಂತಹ ಟೂತ್ ಪೇಸ್ಟ್ ಅನ್ನು ಬಳಸಬಹುದು. ಇದು ಅರಿಶಿನದ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

 ಹಾಗಾಗಿ ಅರಿಶಿನದ ಕಲೆಗಳ ಮೇಲೆ ಟೂತ್ ಪೇಸ್ಟ್ ಅನ್ನು ಹಚ್ಚಿ ಉಜ್ಜಿ ಸ್ವಲ್ಪ ಹೊತ್ತು ಒಣಗಿಸಿ ನಂತರ ನೀರಿನಿಂದ ತೊಳೆಯಿರಿ.
ಬಟ್ಟೆಯಲ್ಲಿರುವ ಅರಿಶಿನ ಕಲೆಗಳನ್ನು ನಿವಾರಿಸಲು ವಿನೆಗರ್ ಅನ್ನು ಬಳಸಿ. ಅದಕ್ಕಾಗಿ ನೀರಿಗೆ ವಿನೆಗರ್ ಅನ್ನು ಬೆರೆಸಿ ಅದರಲ್ಲಿ ಬಟ್ಟೆಯನ್ನು ಅದ್ದಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.

For Latest News Updates, Join Our Whatsapp Community🚩
RELATED ARTICLES

Most Popular