HomeRecipiesಸ್ಪೆಷಲ್‌ ರುಚಿಯ ಸೈಡ್ ಡಿಶ್ ‘ಟೊಮೆಟೊ ಪಲ್ಯ’ ಮಾಡಿ ನೋಡಿ

ಸ್ಪೆಷಲ್‌ ರುಚಿಯ ಸೈಡ್ ಡಿಶ್ ‘ಟೊಮೆಟೊ ಪಲ್ಯ’ ಮಾಡಿ ನೋಡಿ

ರೋಟಿ, ಚಪಾತಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಮ್ಯಾಗಿ ಮ್ಯಾಜಿಕ್ ಮಸಾಲ ಬಳಸಿಕೊಂಡು ಮಾಡುವ ಪಲ್ಯ ಇದೆ ನೋಡಿ.

ಬೇಕಾಗುವ ಸಾಮಾಗ್ರಿಗಳು : 6 ಟೊಮೆಟೊ, 4 ಚಮಚ ಎಣ್ಣೆ, 1 ಚಮಚ ಸಾಸಿವೆ, 1 ಈರುಳ್ಳಿ, 3 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, 1 ಚಮಚ ಉದ್ದಿನಬೇಳೆ, ಮ್ಯಾಗಿ ಮ್ಯಾಜಿಕ್ ಮಸಾಲಾ – 1 ಚಮಚ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಅದು ಸಿಡಿದಾಗ, ಕರಿಬೇವು, ಉದ್ದಿನಬೇಳೆ, ಈರುಳ್ಳಿ, ಹಸಿ ಮೆಣಸಿನಕಾಯಿ ಸೇರಿಸಿ ತುಸು ಪ್ರೈ ಮಾಡಿ. ನಂತರ ಸಣ್ಣಗೆ ಹಚ್ಚಿದ ಟೊಮೆಟೊ ಹಾಕಿ ಉಪ್ಪು ಸೇರಿಸಿ ಬೇಯಲು ಬಿಡಿ ಎಲ್ಲವೂ ಹೊಂದಿಕೊಂಡು ಟೊಮೆಟೊ ಬೆಂದ ಮೇಲೆ ಮ್ಯಾಗಿ ಮ್ಯಾಜಿಕ್ ಮಸಾಲ ಹಾಕಿ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಪಲ್ಯ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular