HomeKarnatakaದೀಪಾವಳಿ ಹಬ್ಬಕ್ಕೆ ಪ್ರಯಾಣಿಕರೇ, ರೈಲು ವಿಶೇಷ Good News

ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರೇ, ರೈಲು ವಿಶೇಷ Good News

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಹಬ್ಬದ ವೇಳೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲು ಸಂಚರಿಸಲಿವೆ.

ಬೆಂಗಳೂರು ಹಾಗೂ ಬೆಳಗಾವಿ ನಡುವೆ ನ.7ರಿಂದ 10ರವರೆಗೆ ವಿಶೇಷ ರೈಲು ಸಂಚರಿಸಲಿವೆ. ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಬೆಳಗಾವಿಗೆ ಎರಡು ಟ್ರಿಪ್ ಹಾಗೂ ಬೆಳಗಾವಿಯಿಂದ ಬೆಂಗಳೂರಿಗೆ ಎರಡು ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿವೆ. ಈ ವಿಶೇಷ ರೈಲು ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ ಹಾಗೂ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನಿಂದ ಹೊರಡುವ ರೈಲು ನವೆಂಬರ್ 7 ಮತ್ತು 9ರಂದು ರಾತ್ರಿ 7 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಹಾಗೆಯೇ ಬೆಳಗಾವಿಯಿಂದ ನವೆಂಬರ್ 8 ಮತ್ತು 10ರಂದು ಸಂಜೆ 5:30ಕ್ಕೆ ರೈಲು ಹೊರಟು, ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರನ್ನು ತಲುಪಲಿದೆ. ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ ಮತ್ತು ಧಾರವಾಡ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಡಿಸೆಂಬರ್-ಜನವರಿಯಲ್ಲಿ 8 ರೈಲು ಸಂಚಾರ ರದ್ದು

ಬೆಂಗಳೂರು: ಹೊಸ ವರ್ಷಕ್ಕೆ ಪ್ರವಾಸಕ್ಕೆಂದು ವಿವಿಧ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಕಹಿ ಸುದ್ದಿ ನೀಡಿದೆ. ಡಿಸೆಂಬರ್ ತಿಂಗಳಿನಲ್ಲಿ ಬರೋಬ್ಬರಿ 8 ರೈಲುಗಳ ಸಂಚಾರ ರದ್ದಾಗಲಿವೆ.

ಗೋವಾದ ಕ್ಯಾಸಲ್ ರಾಕ್ ಮತ್ತು ಕುಲೆಮ್ ರೈಲ್ವೆ ವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಹಳಿ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ.

ಈ ಮಾರ್ಗದಲ್ಲಿ ಚಲಿಸುವ ಡೆಮು (DEMU) ರೈಲು ಸೇವೆ ಸಂಪೂರ್ಣ ರದ್ದಾಗಲಿದ್ದು, ಶಾಲೀಮಾರ್, ತಿರುಪತಿ ಹಾಗೂ ಸಿಕಂದರಾಬಾದ್‌ನಿಂದ ಗೋವಾ (ವಾಸ್ಕೋ ಡ ಗಾಮ) ಕಡೆಗೆ ತೆರಳುವ 8 ಪ್ರಮುಖ ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಾಸ್ಕೋ ಡ ಗಾಮ ಮತ್ತು ಕುಲೆಮ್ ನಡುವಿನ ಡೆಮು ರೈಲು ಸೇವೆ (56964/56963) ಡಿಸೆಂಬರ್ 1, 2026 ರಿಂದ ಜನವರಿ 20, 2027 ರವರೆಗೆ ಸಂಪೂರ್ಣವಾಗಿ ರದ್ದಾಗಲಿದೆ.

ಭಾಗಶಃ ರದ್ದಾಗುವ ಹಾಗೂ ಹುಬ್ಬಳ್ಳಿಯಲ್ಲೇ ಅಂತ್ಯಗೊಳ್ಳುವ ರೈಲುಗಳು:

ನೈಋತ್ಯ ರೈಲ್ವೆ ನೀಡಿರುವ ಮಾಹಿತಿಯಂತೆ ನವೆಂಬರ್ ಕೊನೆಯ ವಾರದಿಂದ ಜನವರಿ ಮೂರನೇ ವಾರದವರೆಗೆ ಈ ಕೆಳಗಿನ ರೈಲುಗಳು ವಾಸ್ಕೋ ಡ ಗಾಮ ಬದಲಿಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿವೆ ಹಾಗೂ ಅಲ್ಲಿಂದಲೇ ಮರಳಿ ಹೊರಡಲಿವೆ.

ಶಾಲೀಮಾರ್-ವಾಸ್ಕೋ ಡ ಗಾಮ ಅಮರಾವತಿ ಎಕ್ಸ್‌ಪ್ರೆಸ್ (18047/18048):

ರೈಲು ಸಂಖ್ಯೆ 18047: 2026ರ ನವೆಂಬರ್ 28 ರಿಂದ 2027ರ ಜನವರಿ 18 ರವರೆಗೆ ವಾಸ್ಕೋ ಬದಲಿಗೆ ಹುಬ್ಬಳ್ಳಿಯಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ.

ರೈಲು ಸಂಖ್ಯೆ 18048 (ಮರುಪ್ರಯಾಣ): ವಾಸ್ಕೋ ಬದಲಿಗೆ ಹುಬ್ಬಳ್ಳಿ ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಹೊರಡಲಿದೆ. 2026ರ ಡಿಸೆಂಬರ್ 1 ರಿಂದ 2027ರ ಜನವರಿ 21 ರವರೆಗೆ ಹುಬ್ಬಳ್ಳಿ-ವಾಸ್ಕೋ ಡ ಗಾಮ ನಡುವಿನ ಸೇವೆ ರದ್ದಾಗಲಿದೆ.

ತಿರುಪತಿ-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17419/17021 ಮತ್ತು 17420/17022):

2026ರ ಡಿಸೆಂಬರ್ 3 ರಿಂದ 2027ರ ಜನವರಿ 14 ರವರೆಗೆ ಈ ರೈಲು ವಾಸ್ಕೋ ಬದಲಿಗೆ ಹುಬ್ಬಳ್ಳಿಯಲ್ಲೇ ಕೊನೆಗೊಳ್ಳಲಿದೆ. ಹುಬ್ಬಳ್ಳಿ ಮತ್ತು ವಾಸ್ಕೋ ನಡುವಿನ ಸೇವೆ ರದ್ದಾಗಿದ್ದು, ಮರಳಿ ಹೊರಡುವ ರೈಲು (17420/17022) ಹುಬ್ಬಳ್ಳಿಯಿಂದಲೇ ಪ್ರಯಾಣ ಆರಂಭಿಸಲಿದೆ.

ಸಿಕಂದರಾಬಾದ್-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17039/17040):

ರೈಲು ಸಂಖ್ಯೆ 17039: 2026ರ ಡಿಸೆಂಬರ್ 2 ರಿಂದ 2027ರ ಜನವರಿ 15 ರವರೆಗೆ ಹುಬ್ಬಳ್ಳಿಯವರೆಗೆ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ-ವಾಸ್ಕೋ ಭಾಗದ ಸೇವೆ ರದ್ದಾಗಲಿದ್ದು, ಮರಳಿ ಹೊರಡುವ ರೈಲು (17040) ಹುಬ್ಬಳ್ಳಿಯಿಂದಲೇ ಆರಂಭವಾಗಲಿದೆ.

ಜಾಸಿಡಿಹ್-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (19322/17321):

ರೈಲು ಸಂಖ್ಯೆ 19322: 2026ರ ನವೆಂಬರ್ 30 ರಿಂದ 2027ರ ಜನವರಿ 18 ರವರೆಗೆ ಹುಬ್ಬಳ್ಳಿಯವರೆಗೆ ಮಾತ್ರ ಚಲಿಸಲಿದೆ. ಮರಳಿ ಹೊರಡುವ ರೈಲು (17321) ವಾಸ್ಕೋ ಬದಲಿಗೆ ಹುಬ್ಬಳ್ಳಿಯಿಂದಲೇ ಪ್ರಯಾಣ ಬೆಳೆಸಲಿದೆ.

ರೈಲು ಸಂಚಾರದ ಸಮಯ ಮತ್ತು ಮಾರ್ಗ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ತಮ್ಮ ಗೋವಾ ಪ್ರವಾಸದ ಯೋಜನೆಯನ್ನು ರೂಪಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular