HomeLatest NewsBIG NEWS: ವ್ಯಾನ್ ಮೇಲೆ ಉರುಳಿಬಿದ್ದ ಸಿಮೆಂಟ್ ಟ್ರಕ್: 9 ಜನರು ಸ್ಥಳದಲ್ಲೇ ಸಾವು

BIG NEWS: ವ್ಯಾನ್ ಮೇಲೆ ಉರುಳಿಬಿದ್ದ ಸಿಮೆಂಟ್ ಟ್ರಕ್: 9 ಜನರು ಸ್ಥಳದಲ್ಲೇ ಸಾವು

ಸಿಮೆಂಟ್ ತುಂಬಿದ್ದ ಟ್ರಕ್ ವ್ಯಾನ್ ಮೇಲೆ ಉರುಳಿಬಿದ್ದ ಪರಿಣಾಮ 9 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೆಶದ ಝಬುವಾದಲ್ಲಿ ನಡೆದಿದೆ. ಘಟನೆಯಲ್ಲಿ ಒಂದೇ ಕುಟುಂಬದ 9 ಜನರು ಸಾವನ್ನಪ್ಪಿದ್ದಾರೆ.

ದುರಂತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಝಬುವಾ ಜಿಲ್ಲೆಯ ಮೇಘನಗರ ತಹಸಿಲ್ ನ ಸಂಜೇಲಿ ರೈಲ್ವೆ ಕ್ರಾಸಿಂಗ್ ಬಳಿ ಈ ಅಪಘಾತ ಸಂಭವಿಸಿದೆ. ರೈಲ್ವೆ ಮೇಲ್ಸೇತುವೆ ದಾಟುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ವ್ಯಾನ್ ಮೇಲೆ ಬಿದ್ದಿದೆ. ವ್ಯಾನ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, 9 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular