HomeLive Newsಉತ್ತರ ಕನ್ನಡ ಜಿಲ್ಲೆಯ ಈ ನಾಲ್ಕು ಪ್ರದೇಶ ಅತಿ ಅಪಾಯಕಾರಿ: ಯಾವಾಗಬೇಕಾದರೂ ಭೂಕುಸಿತ ಸಾಧ್ಯತೆ!

ಉತ್ತರ ಕನ್ನಡ ಜಿಲ್ಲೆಯ ಈ ನಾಲ್ಕು ಪ್ರದೇಶ ಅತಿ ಅಪಾಯಕಾರಿ: ಯಾವಾಗಬೇಕಾದರೂ ಭೂಕುಸಿತ ಸಾಧ್ಯತೆ!

ಕಾರವಾರ: ಕಳೆದಬಾರಿ ಶಿರೂರು ಗುಡ್ಡಕುಸಿತ ದುರಂತ ಘಟನೆ ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ಈ ಬಾರಿ ಮಳೆಗಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತದ ಭೀತಿ ಸುರುವಾಗಿದೆ. ಈ ನಡಿವೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಜ್ಞರು ಜಿಲ್ಲೆಯಲ್ಲಿ ಸರ್ವೆ ಮಾಡಿದ್ದು, ನಾಲ್ಕು ಪ್ರಮುಖ ಪ್ರದೇಶಗಳು ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿವೆ.

ಈ ನಾಲ್ಕು ಸ್ಥಳಗಳು ಅತ್ಯಂತ ಅಪಾಯಕಾರಿಯಾಗಿದ್ದು, ಯಾವುದೇ ಸಂದರ್ಭದಲ್ಲಿ ಗುಡ್ಡಕುಸಿತವಾಗುವ ಸಾದ್ಯತೆ ಇದೆ ಎಂದು ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ. ಇದು ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲೆಯ ಭೂ ಭಾಗಗಳ ಅಧ್ಯಯನ ನಡೆಸಿ, ಹೆದ್ದಾರಿಯ 19 ಸ್ಥಳಗಳು ಅತಿ ಸೂಕ್ಷ್ಮ ಪ್ರದೇಶವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಅವುಗಳಲ್ಲಿ ನಾಲ್ಕು ಸ್ಥಳಗಳು ಅತ್ಯಂತ ಅಪಾಯಕಾರಿ ಸ್ಥಳಗಳಾಗಿವೆ.

ಕುಮಟಾ ತಾಲೂಕಿನ ಬರ್ಗಿಯ ಕರಿಗದ್ದೆ, ಕುಮಟಾ ತಾಲೂಕಿನ ಗೋಕರ್ಣ ಭಾಗದ ತೊರ್ಕೆ ಗ್ರಾಮ, ಹೊನ್ನಾವರದ ಆಲಂಕಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ರೆಸಿಡೆನ್ಸಿಯಲ್ ಸ್ಕೂಲ್, ಯಲ್ಲಾಪುರದ ಕೊಡ್ಲಗದ್ದೆ ಭಾಗದಲ್ಲಿ ಮಣ್ಣು ಹೆಚ್ಚು ಸಡಿಲವಾಗಿದೆ. ಈ ಭಾಗದಲ್ಲಿ ಯಾವಾಗಬೇಕಾದರೂ ಮಣ್ಣು ಕುಸಿಯುವ ಆತಂಕ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular