HomeLatest Newsರಾಜಹಂಸ, ನಾನ್ ಎಸಿ ಸ್ಲೀಪರ್ ಮಾದರಿ ಸಾರಿಗೆ ಬಸ್ ಗಳ ಪ್ರಯಾಣ ದರ ಇಳಿಕೆ

ರಾಜಹಂಸ, ನಾನ್ ಎಸಿ ಸ್ಲೀಪರ್ ಮಾದರಿ ಸಾರಿಗೆ ಬಸ್ ಗಳ ಪ್ರಯಾಣ ದರ ಇಳಿಕೆ

ಮಡಿಕೇರಿ: ಪ್ರಯಾಣಿಕರ ಅನುಕೂಲಕ್ಕಾಗಿ 2026 ರ ಜನವರಿ 5 ರಿಂದ ಜಾರಿಗೆ ಬರುವಂತೆ ಕ.ರಾ.ರ.ಸಾ.ನಿಗಮ ಪುತ್ತೂರು ವಿಭಾಗದ ವತಿಯಿಂದ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆಯಿಂದ ಬೆಂಗಳೂರು ಹಾಗೂ ಮೈಸೂರಿಗೆ ಕಾರ್ಯಾಚರಿಸುವ ರಾಜಹಂಸ ಹಾಗೂ ನಾನ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ.

ವಿವರ ಇಂತಿದೆ:

ಕುಶಾಲನಗರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.780, ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ ರೂ.700, ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ ರೂ.680, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.550,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಶಾಲನಗರ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ ರೂ.620, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.500,

ವಿರಾಜಪೇಟೆ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.620, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.550,

ಗೋಣಿಕೊಪ್ಪ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.620,ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.550,

ಸೋಮವಾರಪೇಟೆ-ಬೆಂಗಳೂರು ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.630, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.550,

ಮಡಿಕೇರಿ-ಮೈಸೂರು ಮಾರ್ಗ ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.570, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.450, ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ.430, ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.280 ಆಗಿದೆ.

ಸಾರ್ವಜನಿಕ ಪ್ರಯಾಣಿಕರು ಈ ರಿಯಾಯಿತಿ ಪ್ರಯಾಣದರದ ಸದುಪಯೋಗವನ್ನು ಪಡೆದುಕೊಂಡು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವಂತೆ ಕರಾರಸಾನಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಅವರು ಕೋರಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular