HomeLatest NewsBIG NEWS : 2024-25 ನೇ ಸಾಲಿನ ರಾಜ್ಯದ ಶಾಲಾ ಶಿಕ್ಷಕರ ವರ್ಗಾವಣೆ :...

BIG NEWS : 2024-25 ನೇ ಸಾಲಿನ ರಾಜ್ಯದ ಶಾಲಾ ಶಿಕ್ಷಕರ ವರ್ಗಾವಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯದ 2024-25 ನೇ ಸಾಲಿನ ಶಾಲಾ ಶಿಕ್ಷಕರ ವರ್ಗಾವಣೆ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿಷಯದನ್ವಯ, 2024-25ನೇ ಸಾಲಿನ ಶಿಕ್ಷಕರ ವರ್ಗಾವಣೆ ಕುರಿತಂತೆ ಉಲ್ಲೆಖಿತ ವತ್ರದಲ್ಲಿ ವಿಸ್ತ್ರತವಾದ ಮಾರ್ಗಸೂಚಿ ಸಹಿತ ವೇಳಾಪಟ್ಟಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆದರೆ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮ 2021ರ ನಿಯಮ 3 (1) (i) (ii) (iii), ಗಳ ಉಲ್ಲಂಘನೆಯ ಆರೋಪದಡಿಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ 10 (1)(ಡಿ) ರನ್ವಯ ಕೆಲವು ಶಿಕ್ಷಕರುಗಳನ್ನು ಕರ್ತವ್ಯಲೋಪದ ಆರೋಪದಡಿಯಲ್ಲಿ ಆಯಾ ವ್ಯಾಪ್ತಿಯ ಸಕ್ಷಮ ಶಿಸ್ತು ಪ್ರಾಧಿಕಾರಿಗಳು ಅಮಾನತ್ತುಗೊಳಿಸಿರುವ ಪ್ರಕರಣಗಳು ಕಂಡುಬಂದಿರುತ್ತದೆ. ಅಲ್ಲದೇ ಕೆಲವು ಉಪನಿರ್ದೇಶಕರುಗಳು ನಿಯಮಬಾಹಿರವಾಗಿ ವ್ಯತಿರಿಕ್ತ ಬೋಧನಾ ವಿಷಯದ ಹುದ್ದೆಗೆ ಮತ್ತು ವರ್ಗಾವಣಾ ಕಾಯ್ದೆಯ ಸೆಕ್ಷನ್-3ರಡಿಯಲ್ಲಿ ವಿವರಿಸಿರುವಂತೆ ಜಿಲ್ಲೆಯಲ್ಲಿ ಅತೀ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಸ್ಥಳ ನಿಯುಕ್ತಿಗೊಳಿಸದೇ ಆಯಾ ವಲಯದಲ್ಲಿನ ಕಡಿಮ ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಹಾಗೂ ಅಂತಹಾ ಶಾಲೆಯಲ್ಲಿ ಶಿಕ್ಷಕರ ಅಗತ್ಯತೆ ಇಲ್ಲದಿದ್ದರೂ ವರ್ಗಾವಣಾ ಕಾಯ್ದೆಯನ್ನು ಉಲ್ಲಂಘಿಸಿ ಸ್ಥಳ ನಿಯುಕ್ತಿಗೊಳಿಸಿರುವ ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ.

ಈಗಾಗಲೇ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಪ್ರಸ್ತುತ ಸ್ಥಳ ನಿಯುಕ್ತಿಯಂತಹಾ ಕ್ರಮಗಳನ್ನು ಕೈಗೊಂಡಲ್ಲಿ ವರ್ಗಾವಣೆಗೆ ನಿಗಧಿಪಡಿಸಿದ ವಿಷಯವಾರು ಹಾಗೂ ತಾಲ್ಲೂಕುವಾರು ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ವರ್ಗಾವಣಾ ತಂತ್ರಾಂಶದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿರುತ್ತದೆ. ಯಾವುದೇ ಶಿಕ್ಷಕರನ್ನು ಸ್ಥಳನಿಯುಕ್ತಿಗೊಳಿಸಿ ತಂತ್ರಾಂಶದಲ್ಲಿಯೇ ಕಡ್ಡಾಯವಾಗಿ ಮಾಹಿತಿಯನ್ನು ಇಂದೀಕರಿಸಬೇಕಾಗುತ್ತದೆ. ಆದರೆ ಪ್ರಸ್ತುತ ವರ್ಗಾವಣೆಯ ಹಿನ್ನೆಲೆಯಲ್ಲಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಇಡೀ ವರ್ಗಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಅಮಾನತ್ತುಗೊಂಡಿರುವ ಶಿಕ್ಷಕರುಗಳನ್ನು ಯಾವುದೇ ಕಾರಣಕ್ಕೂ ಮಾನ್ಯ ಆಯುಕ್ತರ ಅನುಮೋದನೆ ಇಲ್ಲದೇ ಅಮಾನತ್ತು ತೆರವುಗೊಳಿಸಿ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಅವಕಾಶವಿರುವುದಿಲ್ಲ.
ಒಂದು ವೇಳೆ ಅಮಾನತ್ತು ಪ್ರಕರಣಗಳಿಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದಲ್ಲಿ ಅಂತಹಾ ಪ್ರಕರಣಗಳಲ್ಲಿ ಕೂಡಲೆ ತಡೆಯಾಜ್ಞೆಯನ್ನು ತೆರವುಗೊಳಿಸಲು ಇಲಾಖಾ ಕ್ರಮವನ್ನು ಸಮರ್ಥಿಸಿಕೊಂಡು ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರ ಮತ್ತು ಆಕ್ಷೇಪಣಾ ಹೇಳಿಕೆಯನ್ನು ತುರ್ತಾಗಿ ಸಲ್ಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂಬಂಧ ಸಕ್ಷಮ ಶಿಸ್ತು ಪ್ರಾಧಿಕಾರಿಗಳು ಅಗತ್ಯ ಕ್ರಮವಹಿಸತಕ್ಕದ್ದು. ಒಂದು ವೇಳೆ ಅಮಾನತ್ತು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸಲೇಬೇಕಾದಲ್ಲಿ ಅಂತಹಾ ಶಿಕ್ಷಕರ ಪಟ್ಟಿಯನ್ನು ಸೂಕ್ತ ಕಾರಣಗಳೊಂದಿಗೆ ಪೂರಕ ದಾಖಲೆಗಳನ್ನು ಮಾನ್ಯ ಆಯುಕ್ತರ ಅನುಮೋದನೆಗೆ ಸಲ್ಲಿಸತಕ್ಕದ್ದು. ಆದ್ದರಿಂದ ಮುಂದಿನ ಆದೇಶದವರೆಗೂ ಯಾವುದೇ ಶಿಕ್ಷಕರ ಬಿಡುಗಡೆಗೊಳಿಸಲು ಸೇರ್ಪಡೆಗೊಳಿಸದಂತ ಸಕ್ಷಮ ಪ್ರಾಧಿಕಾರಿಗಳು ಅಗತ್ಯ ಕ್ರಮವಹಿಸಲು ತಿಳಿಸಿದ. ಈ ವಿಚಾರದಲ್ಲಿ ಯಾವುದೇ ಲೋಪಕಂಡುಬಂದಲ್ಲಿ ಅಂತಹ ಪ್ರಾಧಿಕಾರಿಗಳನ್ನೇ ನೇರಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular