HomeLatest NewsBIG NEWS : ಸರ್ಕಾರದ ಬೊಕ್ಕಸಕ್ಕೆ ನಷ್ಟ : ರಾಯಚೂರಿನಲ್ಲಿ ಇಬ್ಬರು 'PDO' ಗಳು ಸಸ್ಪೆಂಡ್.!

BIG NEWS : ಸರ್ಕಾರದ ಬೊಕ್ಕಸಕ್ಕೆ ನಷ್ಟ : ರಾಯಚೂರಿನಲ್ಲಿ ಇಬ್ಬರು ‘PDO’ ಗಳು ಸಸ್ಪೆಂಡ್.!

ರಾಯಚೂರು: ಸರ್ಕಾರಿ ಬೊಕ್ಕಸಕ್ಕೆ ನಷ್ಟ, ಕರ್ತವ್ಯ ಲೋಪ ಆರೋಪದಲ್ಲಿ ಇಬ್ಬರು ಪಿಡಿಒಗಳನ್ನು ಅಮನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿಯಲ್ಲಿ ನಡೆದಿದೆ.

ಚಿಂಚೋಡಿ ಗ್ರಾಮ ಪಂಚಾಯತ್ ಪಿಡಿಓ ಶಿವರಾಜ್ ಹಾಗೂ ಲಿಂಗಸಗೂರಿನ ಕೋಠಾ ಗ್ರಾಮಪಂಚಾಯತ್ ಪಿಡಿಓ ಗಂಗಮ್ಮ ಅಮಾನತುಗೊಂಡವರು. ರಾಯಚೂರು ಜಿಲ್ಲಾಪಂಚಾಯತ್ ಸಿಇಓ ಪಾಂಡ್ವೆ ರಾಹುಲ್ ತುಕಾರಾಮ್ ಆದೇಶ ಹೊರಡಿಸಿದ್ದಾರೆ.

ಪಿಡಿಓ ವಿರುದ್ಧ 15ನೇ ಹಣಕಾಸು ಯೋಜನೆಯಲ್ಲಿ 26,71,303 ರೂ ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಕಾಮಗಾರಿಗಳ ಬಿಲ್ ಹಾಗೂ ಸಾಮಗ್ರಿಗಳ ಖರೀದಿ ಬಿಲ್ ವ್ಯತ್ಯಯ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಿಡಿಓ ಶಿವರಾಜ್ 14.77 ಲಕ್ಷ ಹಣ ಬಳಕೆ ಬಗ್ಗೆ ದಾಖಲೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular