HomeKarnatakaರೈಲು ಹಳಿ ಮೇಲೆ ಮರ ಬಿದ್ದು ಅವಾಂತರ: ತಾಳಗುಪ್ಪ- ಬೆಂಗಳೂರು ರೈಲು ಸಂಚಾರ ಸ್ಥಗಿತ; ಪ್ರಯಾಣಿಕರ...

ರೈಲು ಹಳಿ ಮೇಲೆ ಮರ ಬಿದ್ದು ಅವಾಂತರ: ತಾಳಗುಪ್ಪ- ಬೆಂಗಳೂರು ರೈಲು ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ

ಶಿವಮೊಗ್ಗ: ಬಿರುಗಾಳಿ ಮಳೆಯಿಂದಾಗಿ ರೈಲು ಹಳಿ ಮೇಲೆ ಮಾಬಿದ್ದು ಅವಾಂತರ ಸೃಷ್ಟಿಯಾಗಿದ್ದು, ತಾಳಗುಪ್ಪ-ಬೆಂಗಳೂರು ನಡುವಿನ ರೈಲು ಸಂಚಾರ ತಾತ್ಕಲೈಕ ಸ್ಥಗಿತಗೊಂಡಿರುವ ಘಟನೆ ನಡೆದಿದೆ.

ಅರಸಾಳು ಬಳಿ ರೈಲು ಹಳಿ‌‌ ಮೇಲೆ‌ ಮರ ಬಿದ್ದ ಪರಿಣಾಮ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ಇಂಟರ್ ಸಿಟಿ‌ ಸೂಪರ್ ಫಾಸ್ಟ್ ರೈಲಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋದವರು, ಹಬ್ಬ ಮುಗಿಸಿ ಕೆಲಸಕ್ಕಾಗಿ ಬೆಂಗಳೂರಿಗೆ ವಾಪಾಸ್ ಆಗುವವರು ಪರದಾಟ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಹಠಾತ್ತಾಗಿ ಮಾರ್ಗಮಧ್ಯೆ ನಿಂತಿರುವ ಕಾರಣ, ಕಚೇರಿಗಳಿಗೆ ತೆರಳಬೇಕಿದ್ದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಿಗದಿತ ಸಮಯಕ್ಕೆ ತಲುಪಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ.

ರೈಲು ಎಂದಿನಂತೆ ತಾಳಗುಪ್ಪವನ್ನು ಬೆಳಗ್ಗೆ 5:15 ಕ್ಕೆ ಬಿಟ್ಟಿತ್ತು. ಸಮಯಕ್ಕೆ ಸರಿಯಾಗಿ ಹೊಸನಗರ ತಾಲೂಕಿನ ಅರಸಾಳು ಬಳಿ ಬಂದಿತ್ತು. ಈ ವೇಳೆ ರೈಲು ಹಳಿ ಮೇಲೆ‌ ಬೃಹತ್ ಮರವೊಂದು ಬಿದ್ದ ಪರಿಣಾಮ ರೈಲನ್ನು ನಿಲ್ಲಿಸಲಾಗಿದೆ.

ಹಳಿ ಮೇಲಿಂದ ಮರವನ್ನು ತೆರವು ಮಾಡಲು ಸಾಕಷ್ಟು ಸಮಯ ಬೇಕಾಗುತ್ತಿದೆ. ರೈಲು ನಿಂತ ಪರಿಣಾಮ ಬೆಂಗಳೂರಿಗೆ ಹೊರಟಿದ್ದ ಸಾಗರ, ಶಿರಸಿಯ ಜನರು ರೈಲಿನಲ್ಲಿಯೇ ಉಳಿದು ಕೊಂಡು ಪೇಚಿಗೆ ಸಿಲುಕಿದ್ದಾರೆ. ಇನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಪ್ರಯಾಣಿಕರು ಶಿವಮೊಗ್ಗ ರೈಲು ನಿಲ್ದಾಣದಲ್ಲೇ ಕಾಯುವಂತಾಗಿತ್ತು. ಬೆಳಗ್ಗೆ 7 ರಿಂದ‌ 7.15 ಕ್ಕೆ ರೈಲು ಶಿವಮೊಗ್ಗಕ್ಕೆ ಬಂದು ಬೆಂಗಳೂರಿಗೆ 12 ರಿಂದ 12.30 ಕ್ಕೆ ತಲುಪಬೇಕಿತ್ತು.

ರೈಲ್ವೆ ಇಲಾಖೆಯ ಕಾರ್ಮಿಕರು ಹಾಗೂ ಅರಸಾಳು ಗ್ರಾಮಸ್ಥರ ಸಹಕಾರದಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದರಿಂದ ಕೆಲ ಸಮಯದಲ್ಲಿಯೇ ರೈಲು ಹೊರಡಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲಿಗೆ ಡಿಸೇಲ್ ಎಂಜಿನ್ ವ್ಯವಸ್ಥೆ ಮಾಡಲಾಗಿದೆ. ಡಿಸೇಲ್ ಇಂಜಿನ್ ಮೂಲಕ ಕುಂಸಿಯ ವರೆಗೂ ರೈಲು ಬರಲಿದೆ. ಬಳಿಕ ವಿದ್ಯುತ್ ಸಂಪರ್ಕದಿಂದ ಪುನಃ ರೈಲು ಸಂಚಾರಿಸಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular