HomeLatest Newsಮನೆ ಮುಂದೆಯೇ ರೈಲು ಬಂದಾಗ ಪತ್ನಿಗೆ ಪ್ರೀತಿಯ ಹಾರ್ನ್ ಸದ್ದು: ಲೋಕೋ ಪೈಲಟ್ ಪತಿಯ ಈ...

ಮನೆ ಮುಂದೆಯೇ ರೈಲು ಬಂದಾಗ ಪತ್ನಿಗೆ ಪ್ರೀತಿಯ ಹಾರ್ನ್ ಸದ್ದು: ಲೋಕೋ ಪೈಲಟ್ ಪತಿಯ ಈ ಐಡಿಯಾಕ್ಕೆ ನೆಟ್ಟಿಗರು ಫಿದಾ!

ಪತಿ-ಪತ್ನಿಯ ನಡುವಿನ ಪ್ರೀತಿ ವ್ಯಕ್ತಪಡಿಸಲು ದೊಡ್ಡ ಉಡುಗೊರೆಗಳೇ ಬೇಕಿಲ್ಲ, ಸಣ್ಣ ಸಣ್ಣ ಸನ್ನೆಗಳೇ ಸಾಕು ಎಂಬುದಕ್ಕೆ ಮಹಾರಾಷ್ಟ್ರದ ಈ ಘಟನೆ ಸಾಕ್ಷಿಯಾಗಿದೆ. ಕರ್ತವ್ಯದ ಮೇಲಿದ್ದ ರೈಲ್ವೆ ಲೋಕೋ ಪೈಲಟ್ ಒಬ್ಬರು ತಮ್ಮ ಮನೆ ಪಕ್ಕದಲ್ಲೇ ರೈಲು ಚಲಿಸುವಾಗ ಪತ್ನಿಗೆ ವಿಶೇಷವಾಗಿ ವಿಶ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ರೈಲು ಬರುವುದನ್ನು ಕಾಯುತ್ತಿರುತ್ತಾರೆ. ದೂರದಿಂದ ರೈಲು ಬರುತ್ತಿದ್ದಂತೆ ಚಾಲಕನ ಸೀಟಿನಲ್ಲಿದ್ದ ಆಕೆಯ ಪತಿ ಸತತವಾಗಿ ಹಾರ್ನ್ ಮಾಡುವ ಮೂಲಕ ಪತ್ನಿಗೆ ಸಂಕೇತ ನೀಡುತ್ತಾರೆ. ರೈಲು ಮನೆಯ ಹತ್ತಿರ ಬರುತ್ತಿದ್ದಂತೆ ಲೋಕೋ ಪೈಲಟ್ ಇಂಜಿನ್‌ನ ಬಾಗಿಲ ಬಳಿ ನಿಂತು ಪತ್ನಿಯ ಕಡೆಗೆ ಕೈ ಬೀಸುವ ಮೂಲಕ ಪ್ರೀತಿಯಿಂದ ವಂದಿಸುತ್ತಾರೆ.

ನೋಸ್ಟಾಲ್ಜಿಕ್ ನೆನಪುಗಳನ್ನು ಹಂಚಿಕೊಂಡ ನೆಟ್ಟಿಗರು ಅಕ್ಟೋಬರ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. ಈ ಸುಂದರ ದೃಶ್ಯವನ್ನು ನೋಡಿ ಅನೇಕರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. “ನನ್ನ ತಂದೆ ಕೂಡ ರೈಲ್ವೆ ಚಾಲಕರಾಗಿದ್ದರು, ಅವರು ನಮ್ಮ ಶಾಲೆಯ ಹತ್ತಿರ ರೈಲು ಬಂದಾಗ ಹೀಗೆಯೇ ಹಾರ್ನ್ ಮಾಡುತ್ತಿದ್ದರು” ಎಂದು ಒಬ್ಬರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. “ಇದು ಕೇವಲ ಹಾರ್ನ್ ಸದ್ದಲ್ಲ, ಐ ಲವ್ ಯೂ ಎಂದು ಹೇಳುವ ಪತಿಯ ಪ್ರೀತಿ” ಎಂದು ಮತ್ತೊಬ್ಬರು ಬಣ್ಣಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವರು ತಮಾಷೆಯಾಗಿ “ಸಾರ್, ಹಾರ್ನ್ ಹೊಡೆಯುವ ಭರದಲ್ಲಿ ಸಿಗ್ನಲ್ ಕಡೆಗೆ ಗಮನವಿರಲಿ” ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಯಾಂತ್ರಿಕ ಜೀವನದ ನಡುವೆ ಕೆಲಸದ ಒತ್ತಡದ ಮಧ್ಯೆಯೂ ಪತ್ನಿಗಾಗಿ ಸಮಯ ಮೀಸಲಿಟ್ಟ ಈ ಲೋಕೋ ಪೈಲಟ್‌ನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular