ಧಾರವಾಡ : ಧಾರವಾಡ ನಗರದಾದ್ಯಂತ ಇರುವ ಸ್ವಯಂ ಚಾಲಿತ ಸಿ.ಸಿ.ಟಿ.ವಿ ಕ್ಯಾಮರಾಗಳಲ್ಲಿ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ಮೋಟಾರ ವಾಹನ ಪ್ರಕರಣಗಳು ದಾಖಲಾಗಿರುತ್ತವೆ.
ಆದ್ದರಿಂದ ಸಾರ್ವಜನಿಕರು ಕೂಡಲೇ ಬಾಕಿ ಇರುವ ದಂಡದ ಮೊತ್ತವನ್ನು ಕರ್ನಾಟಕ ಒನ್ ಆನ್ಲೈನ್ ಮುಖಾಂತರ ಅಥವಾ ಸಂಚಾರ ಠಾಣೆಯ ಎ.ಎಸ್.ಐ ಮೇಲ್ಪಟ್ಟ ಅಧಿಕಾರಿಗಳ ಬಳಿ ಅಥವಾ ಟಿ.ಎಂ.ಸಿ ಕೇಂದ್ರ ಧಾರವಾಡ ಸಂಚಾರ ಠಾಣೆಯಲ್ಲಿ ಖುದ್ದಾಗಿ ಬಂದು ದಂಡ ಪಾವತಿ ಮಾಡಬೇಕೆಂದು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಘಟಕಗಳ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಧಾರವಾಡ : 2026-27 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ವಿವಿಧ ಘಟಕಗಳಾದ ಹೊಸ ಪ್ರದೇಶ ವಿಸ್ತರಣೆ (ಡ್ರ್ಯಾಗನ್ ಫ್ರೂಟ್, ಬಾಳೆ, ಲಿಂಬೆ), ಹೂ ಬೆಳೆ ಪ್ರದೇಶ ವಿಸ್ತರಣೆ, ತರಕಾರಿ ಬೆಳೆಗಳ ಪ್ರದೇಶ ವಿಸ್ತರಣೆ, ಈರುಳ್ಳಿ ಶೇಖರಣಾ ಘಟಕ, ವೈಯಕ್ತಿಕ ಕೃಷಿ ಹೊಂಡ, ತಳ್ಳುಗಾಡಿ, 20 ಹೆಚ್.ಪಿ.ಗಿಂತ ಕಡಿಮೆ ಇರುವ ಟ್ರ್ಯಾಕ್ಟರ್ ಘಟಕಗಳಿಗೆ ಸಹಾಯಧನ ಪಡೆಯಲು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ರೈತರು ಜೂನ್ 15, 2026 ರೊಳಗಾಗಿ ನವಲಗುಂದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಲ್ಲಾ ಪಂಚಾಯತ್) ಕಛೇರಿಗೆ ಅರ್ಜಿ ಸಲ್ಲಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

