ಬೆಂಗಳೂರು: ಭಾರತೀಯ ರಸ್ತೆಗಳಲ್ಲಿ ದಶಕಗಳಿಂದಲೂ ವಿಶ್ವಾಸಾರ್ಹತೆ ಮತ್ತು ಐಷಾರಾಮಿ ಸೌಕರ್ಯಕ್ಕೆ ಪರ್ಯಾಯ ಹೆಸರಾಗಿರುವುದು ಟೊಯೋಟಾ ಇನ್ನೋವಾ ಕ್ರಿಸ್ಟಾ ದೊಡ್ಡ ಕುಟುಂಬಗಳಿಗೆ ಮತ್ತು ದೂರದ ಪ್ರಯಾಣಕ್ಕೆ ಈ ಎಂಪಿವಿ (MPV) ಮೊದಲ ಆಯ್ಕೆಯಾಗಿದೆ.ಇನ್ನೋವಾ ಕ್ರಿಸ್ಟಾ ಕೇವಲ ಒಂದು ಕಾರಲ್ಲ ಅದು ಲಕ್ಷಾಂತರ ಭಾರತೀಯ ಕುಟುಂಬಗಳ ಭಾವನೆ. ಲಾಂಗ್ ಡ್ರೈವ್‌ಗಳಿಗೆ ಹೇಳಿ ಮಾಡಿಸಿದ ಶಕ್ತಿಶಾಲಿ ಡೀಸೆಲ್ ಎಂಜಿನ್.ಕುಟುಂಬದ ಸುರಕ್ಷತೆಗೆ ಆದ್ಯತೆ ನೀಡುವ ಅತ್ಯುತ್ತಮ ಸೇಫ್ಟಿ ಫೀಚರ್ಸ್.ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಇನ್ನೋವಾ ಕ್ರಿಸ್ಟಾಗೆ ಭಾರಿ ಬೇಡಿಕೆಯಿದೆ.
ಭಾರಿ ಮೊತ್ತದ ಹಣವನ್ನು ಒಮ್ಮೆಗೆ ಪಾವತಿಸುವ ಅಗತ್ಯವಿಲ್ಲದೆ, ಸುಲಭ ಇಎಂಐ (EMI) ಆಯ್ಕೆಗಳ ಮೂಲಕ ನೀವು ಈ ಐಷಾರಾಮಿ 7-ಸೀಟರ್ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.
ಬೆಲೆ ಮತ್ತು ವಿಶೇಷತೆ:
ಇನ್ನೋವಾ ಕ್ರಿಸ್ಟಾ ಕೇವಲ ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಪೆಟ್ರೋಲ್ ಆವೃತ್ತಿ ಲಭ್ಯವಿಲ್ಲ. ಇದರ ಅಗ್ಗದ 7-ಸೀಟರ್ ಮಾದರಿಯ ಎಕ್ಸ್ ಶೋರೂಂ ಬೆಲೆ ₹18.85 ಲಕ್ಷದಿಂದ ಆರಂಭವಾಗುತ್ತದೆ.
ಬೆಂಗಳೂರಿನಲ್ಲಿ ಆನ್-ರೋಡ್ ಬೆಲೆ: ಸುಮಾರು ₹23,26,213.
ದೆಹಲಿಯಲ್ಲಿ ಆನ್-ರೋಡ್ ಬೆಲೆ: ಸುಮಾರು ₹21.92 ಲಕ್ಷ (2.4 GX 7Str ಆವೃತ್ತಿ).
ಫೈನಾನ್ಸ್ ಮತ್ತು ಇಎಂಐ ಲೆಕ್ಕಾಚಾರ (ಉದಾಹರಣೆಗೆ):
ನೀವು ₹2 ಲಕ್ಷ ಡೌನ್ ಪೇಮೆಂಟ್ ಪಾವತಿಸಿದರೆ, ಉಳಿದ ₹19.92 ಲಕ್ಷ ಮೊತ್ತಕ್ಕೆ ಸಾಲ ಸೌಲಭ್ಯ ಪಡೆಯಬಹುದು. 9% ಬಡ್ಡಿದರದಲ್ಲಿ ಮಾಸಿಕ ಕಂತುಗಳ ವಿವರ ಹೀಗಿದೆ:
ಸಾಲದ ಅವಧಿ ಮಾಸಿಕ EMI
5 ವರ್ಷಗಳು ₹41,355
6 ವರ್ಷಗಳು ₹35,911
7 ವರ್ಷಗಳು ₹32,053
ನೀವು ಡೌನ್ ಪೇಮೆಂಟ್ ಮೊತ್ತವನ್ನು ಹೆಚ್ಚಿಸಿದಷ್ಟೂ ನಿಮ್ಮ ಮಾಸಿಕ ಇಎಂಐ ಹೊರೆ ಕಡಿಮೆಯಾಗಲಿದೆ. ಸಾಲ ಪಡೆಯುವ ಮುನ್ನ ಬ್ಯಾಂಕ್ ನೀತಿಗಳು ಮತ್ತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಉತ್ತಮ.
ಮಾರುಕಟ್ಟೆಯಲ್ಲಿನ ಪೈಪೋಟಿ:
ಇನ್ನೋವಾ ಕ್ರಿಸ್ಟಾ ಪ್ರೀಮಿಯಂ ಎಂಪಿವಿ (MPV) ವಿಭಾಗದಲ್ಲಿ ತನ್ನದೇ ಆದ ದಬದಬೆ ಹೊಂದಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ ಕಾರುಗಳೆಂದರೆ:
ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊ.
ಕಿಯಾ ಕ್ಯಾರೆನ್ಸ್ ಮತ್ತು ಮಹೀಂದ್ರಾ XUV700.
ಟಾಟಾ ಸಫಾರಿ, MG ಹೆಕ್ಟರ್ ಪ್ಲಸ್ ಮತ್ತು ಮಹೀಂದ್ರಾ ಸ್ಕಾರ್ಪಿಯೋ-N

