HomeLatest Newsಕನ್ನಡಿಗರು ತೆಲುಗು ಚಿತ್ರಗಳನ್ನು ಸದಾ ಪ್ರೀತಿಸುತ್ತೇವೆ, ಬೆಂಬಲಿಸುತ್ತೇವೆ: ಇವು ನನ್ನ ಫೇವರಿಟ್ ತೆಲುಗು ಚಿತ್ರಗಳೆಂದು 6...

ಕನ್ನಡಿಗರು ತೆಲುಗು ಚಿತ್ರಗಳನ್ನು ಸದಾ ಪ್ರೀತಿಸುತ್ತೇವೆ, ಬೆಂಬಲಿಸುತ್ತೇವೆ: ಇವು ನನ್ನ ಫೇವರಿಟ್ ತೆಲುಗು ಚಿತ್ರಗಳೆಂದು 6 ಹೆಸರು ಹೇಳಿದ ಯಶ್; ವಿಡಿಯೊ

ನಿನ್ನೆ ( ಆಗಸ್ಟ್ 22 ) ಹೈದರಾಬಾದ್‌ನ ಮಲ್ಲಾರೆಡ್ಡಿ ಕಾಲೇಜು ಮೈದಾನದಲ್ಲಿ ಟಾಕ್ಸಿಕ್ ಚಿತ್ರದ ಪ್ರಿ ರಿಲೀಸ್ ಇವೆಂಟ್ ಬೃಹತ್ ಮಟ್ಟದಲ್ಲಿ ನಡೆಯಿತು. ಒಂದೆಡೆ ಚಿತ್ರದ ಮುಂಗಡ ಟಿಕೆಟ್ ಮಾರಾಟ ಆರಂಭವಾಗಿ ಭರ್ಜರಿ ಗಳಿಕೆಯಾಗುತ್ತಿದ್ದು, ಈ ವೇಳೆ ಚಿತ್ರದ ಹೈಪ್ ಹೆಚ್ಚಿಸಲು ಚಿತ್ರತಂಡ ಮಾಡಿದ ಈ ಕಾರ್ಯಕ್ರಮ ಸಕ್ಸಸ್ ಕಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಯಕ್ರಮದ ಕ್ಲಿಪ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತೆಲುಗು ಮಂದಿ ಟಾಕ್ಸಿಕ್ ಚಿತ್ರದ ಕುರಿತು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚರ್ಚಿಸಲು ಆರಂಭಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕಾರ್ಯಕ್ರಮದಲ್ಲಿ ಹೆಚ್ಚು ಸಮಯದ ಕಾಲ ಮಾತನಾಡಿದ ಯಶ್ ತೆಲುಗಿನಲ್ಲೇ ಮಾತನಾಡಿದ್ದು ತೆಲುಗು ಮಂದಿಗೆ ಇಷ್ಟವಾಗಿ ಥೇಟ್ ತೆಲುಗು ನಟರ ಹಾಗೆ ಸರಾಗವಾಗಿ ತೆಲುಗು ಮಾತನಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಯಶ್‌ಗೆ ನಿರೂಪಕಿ ತೆಲುಗು ಚಿತ್ರಗಳ ಬಗ್ಗೆ ಸಹ ಪ್ರಶ್ನೆ ಕೇಳಿದ್ದು, ಯಾವ ಚಿತ್ರಗಳು ಫೇವರಿಟ್ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಯಶ್ ತಮಗೆ ಇಷ್ಟವಾದ ತೆಲುಗು ಚಿತ್ರಗಳು ತುಂಬಾ ಇವೆ ಎಂದರು. ಹಾಗೂ ‘ಕರ್ನಾಟಕದಲ್ಲಿ ನಾವು ತೆಲುಗು ಚಿತ್ರಗಳನ್ನು ಪ್ರೀತಿಸುತ್ತೇವೆ, ನಾವು ಯಾವಾಗಲೂ ತೆಲುಗು ಚಿತ್ರಗಳನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಬಾಹುಬಲಿಯಾಗಲಿ, ಪೋಕಿರಿಯಾಗಲಿ, ಒಜಿ, ಮಗಧೀರ ಹೀಗೆ ಹಲವಾರು ಚಿತ್ರಗಳು ನನಗಿಷ್ಟ. ಇತ್ತೀಚೆಗೆ ಬಿಡುಗಡೆಯಾದ ಪುಷ್ಪ ಕೂಡ ಇಷ್ಟ, ಹಾಗೆಯೇ ಕಿಕ್ ಚಿತ್ರ ಸಹ ನನ್ನ ಫೇವರಿಟ್’ ಎಂದು ಆರು ಚಿತ್ರಗಳನ್ನು ಉಲ್ಲೇಖಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular