HomeBusinessಬಾಡಿಗೆ ಮನೆಗೆ ಅಡ್ವಾನ್ಸ್ ಕೊಡ್ತಿದ್ದೀರಾ? ಬೆಂಗಳೂರಿನ ಬಾಡಿಗೆದಾರರು ಈ ವಿಷಯ ತಿಳಿಯಲೇಬೇಕು

ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡ್ತಿದ್ದೀರಾ? ಬೆಂಗಳೂರಿನ ಬಾಡಿಗೆದಾರರು ಈ ವಿಷಯ ತಿಳಿಯಲೇಬೇಕು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೂಕ್ತವಾದ ಬಾಡಿಗೆ ಮನೆ ಹುಡುಕುವುದು ಅಷ್ಟು ಸುಲಭದ ಮಾತಲ್ಲ. ಒಂದೊಳ್ಳೆ ಮನೆ ಸಿಕ್ಕ ತಕ್ಷಣ, ಅಬ್ಬಾ ಮನೆ ಸಿಕ್ಕಿತಲ್ಲ ಎಂಬ ಖುಷಿಯಲ್ಲಿ ಆತುರಪಟ್ಟು ಅಡ್ವಾನ್ಸ್ ಹಣ ಕೊಟ್ಟುಬಿಡಬೇಡಿ ಮನೆ ಇಷ್ಟವಾಯಿತೆಂದು ತಕ್ಷಣವೇ ಅಡ್ವಾನ್ಸ್ ನೀಡುವ ಮುನ್ನ, ಬಾಡಿಗೆ ಮೊತ್ತದಿಂದ ಹಿಡಿದು ಅಡ್ವಾನ್ಸ್ ಹಣ, ರೆಂಟ್ ಅಗ್ರಿಮೆಂಟ್ ಹಾಗೂ ಇತರ ನಿಯಮಗಳನ್ನು ಸರಿಯಾಗಿ ಪರಿಶೀಲಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಮುಂದೆ ಮಾಲೀಕರ ಜೊತೆ ಅನಗತ್ಯ ಕಿರಿಕಿರಿ ಹಾಗೂ ಹಣಕಾಸಿನ ನಷ್ಟ ಅನುಭವಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯುವಾಗ ಯಾವೆಲ್ಲಾ ಪ್ರಮುಖ ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕು?

1. ಬಾಡಿಗೆ ಮತ್ತು ಸೆಕ್ಯುರಿಟಿ ಡೆಪಾಸಿಟ್ (ಅಡ್ವಾನ್ಸ್) ಸ್ಪಷ್ಟವಾಗಿರಲಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಿಂಗಳ ಬಾಡಿಗೆ: ಪ್ರತಿ ತಿಂಗಳು ಕಟ್ಟಬೇಕಾದ ಬಾಡಿಗೆ ಎಷ್ಟು ಮತ್ತು ಪ್ರತಿ ವರ್ಷಕ್ಕೆ ಎಷ್ಟು ಶೇಕಡಾದಷ್ಟು ಹೆಚ್ಚಾಗುತ್ತದೆ ಎಂಬುದನ್ನು ಮೊದಲೇ ಕೇಳಿ ತಿಳಿದುಕೊಳ್ಳಿ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ವರ್ಷಕ್ಕೆ ಶೇಕಡಾ 5 ರಿಂದ 10 ರಷ್ಟು ಬಾಡಿಗೆ ಹೆಚ್ಚಿಸಲಾಗುತ್ತದೆ.

ಅಡ್ವಾನ್ಸ್ ಹಣ: ಸೆಕ್ಯುರಿಟಿ ಡೆಪಾಸಿಟ್ ಎಷ್ಟು ತಿಂಗಳದ್ದು ಮತ್ತು ಮನೆ ಖಾಲಿ ಮಾಡುವಾಗ ಯಾವ ಆಧಾರದ ಮೇಲೆ ಎಷ್ಟು ಹಣ ವಾಪಸ್ ಕೊಡುತ್ತಾರೆ ಎಂಬುದನ್ನು ಲಿಖಿತವಾಗಿ ಬರೆಸಿಕೊಳ್ಳಿ. ಕೇವಲ ಬಾಯಿ ಮಾತಿನ ಒಪ್ಪಂದಕ್ಕೆ ಎಂದಿಗೂ ಒಪ್ಪಬೇಡಿ.

2. ನೀರು ಮತ್ತು ವಿದ್ಯುತ್ ಬಿಲ್ ಗೊಂದಲ ಇರಬಾರದು

ನೀರಿನ ಸೌಲಭ್ಯ: ಮನೆಯಲ್ಲಿ 24 ಗಂಟೆ ನೀರು ಸಿಗುತ್ತದೆಯೇ? ಅದು ಬೋರ್‌ವೆಲ್ ನೀರೋ ಅಥವಾ ಕಾವೇರಿ ನೀರೋ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ.

ವಿದ್ಯುತ್ ಮೀಟರ್: ನಿಮ್ಮ ಮನೆಗೆ ಪ್ರತ್ಯೇಕ ವಿದ್ಯುತ್ ಮೀಟರ್ ಇದೆಯೇ ಅಥವಾ ಬೇರೆಯವರ ಜೊತೆ ಹಂಚಿಕೊಂಡಿದೆಯೇ (Common Meter) ಎಂದು ಪರಿಶೀಲಿಸಿ. ಕಾಮನ್ ಮೀಟರ್ ಇದ್ದರೆ ಮುಂದೆ ಬಿಲ್ ಹಂಚಿಕೊಳ್ಳುವಾಗ ಜಗಳವಾಗುವ ಸಾಧ್ಯತೆ ಹೆಚ್ಚು. ತಿಂಗಳಿಗೆ ಸರಾಸರಿ ಎಷ್ಟು ಬಿಲ್ ಬರಬಹುದು ಎಂದು ಅಲ್ಲಿನ ನಿವಾಸಿಗಳನ್ನು ವಿಚಾರಿಸಿ.

3. ರಿಪೇರಿ ಮತ್ತು ಮೇಂಟೇನೆನ್ಸ್ ಯಾರ ಜವಾಬ್ದಾರಿ?

ಪೈಪ್ ಲೀಕೇಜ್, ಸ್ವಿಚ್ ಬೋರ್ಡ್ ಸಮಸ್ಯೆ, ವಾಟರ್ ಮೋಟಾರ್ ಕೆಟ್ಟರೆ ಅಥವಾ ಪೇಂಟಿಂಗ್ ಖರ್ಚನ್ನು ಯಾರು ಭರಿಸಬೇಕು ಎಂಬುದನ್ನು ಅಗ್ರಿಮೆಂಟ್‌ನಲ್ಲೇ ಸ್ಪಷ್ಟಪಡಿಸಿಕೊಳ್ಳಿ.

ಸಾಮಾನ್ಯವಾಗಿ ರೂ. 500 ಒಳಗಿನ ಸಣ್ಣಪುಟ್ಟ ರಿಪೇರಿ ಬಾಡಿಗೆದಾರರದ್ದು ಮತ್ತು ದೊಡ್ಡ ಮಟ್ಟದ ರಿಪೇರಿ ವೆಚ್ಚ ಮನೆ ಮಾಲೀಕರದ್ದು ಎಂಬ ನಿಯಮ ಮಾಡಿಕೊಳ್ಳುವುದು ಒಳಿತು.

4. ರೆಂಟ್ ಅಗ್ರಿಮೆಂಟ್ ಮತ್ತು ಪೊಲೀಸ್ ವೆರಿಫಿಕೇಷನ್ ಕಡ್ಡಾಯ

11 ತಿಂಗಳ ಬಾಡಿಗೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯ. ಅದರಲ್ಲಿ ಬಾಡಿಗೆ, ಅಡ್ವಾನ್ಸ್ ಮೊತ್ತ, ನೋಟಿಸ್ ಪೀರಿಯಡ್ ಎಲ್ಲವೂ ಸ್ಪಷ್ಟವಾಗಿ ನಮೂದಾಗಿರಲಿ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಾಡಿಗೆದಾರರ ಮಾಹಿತಿ ನೀಡುವುದು ಸುರಕ್ಷತೆಯ ದೃಷ್ಟಿಯಿಂದ ಇಬ್ಬರಿಗೂ ಒಳ್ಳೆಯದು.

5. ಇತರ ಪ್ರಮುಖ ನಿಯಮಗಳು

ಪಾರ್ಕಿಂಗ್ & ನೋಟಿಸ್ ಪೀರಿಯಡ್: ನಿಮ್ಮ ಬೈಕ್ ಅಥವಾ ಕಾರಿಗೆ ಸೂಕ್ತ ಪಾರ್ಕಿಂಗ್ ಇದೆಯೇ? ಮನೆ ಖಾಲಿ ಮಾಡಲು ಎಷ್ಟು ತಿಂಗಳ ಮುಂಚಿತವಾಗಿ ನೋಟಿಸ್ ನೀಡಬೇಕು (ಸಾಮಾನ್ಯವಾಗಿ 1 ರಿಂದ 2 ತಿಂಗಳು) ಎಂಬುದನ್ನು ತಿಳಿದುಕೊಳ್ಳಿ.

ಸಾಕುಪ್ರಾಣಿಗಳು & ಅತಿಥಿಗಳು: ಸಾಕುಪ್ರಾಣಿಗಳನ್ನು (Pets) ಸಾಕಲು ಅವಕಾಶ ಇದೆಯೇ, ಬಂಧುಗಳು ಅಥವಾ ಅತಿಥಿಗಳು ಬಂದಾಗ ಏನಾದರೂ ನಿರ್ಬಂಧಗಳಿವೆಯೇ ಎಂದು ವಿಚಾರಿಸಿ.

ಮಾಲೀಕತ್ವದ ದಾಖಲೆ: ಕೊನೆಯದಾಗಿ, ಮನೆ ಬಾಡಿಗೆಗೆ ನೀಡುತ್ತಿರುವ ವ್ಯಕ್ತಿಯೇ ನಿಜವಾದ ಮಾಲೀಕನಾ ಅಥವಾ ಅಲ್ಲಿ ಏನಾದರೂ ಕಾನೂನು ಸಮಸ್ಯೆಗಳಿವೆಯೇ ಎಂಬುದನ್ನು ಒಮ್ಮೆ ಖಚಿತಪಡಿಸಿಕೊಳ್ಳಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular