ಕೆಜಿಎಫ್ 2′ ಸೃಷ್ಟಿಸಿದ್ದ ಅಭೂತಪೂರ್ವ ಯಶಸ್ಸಿನ ನಂತರ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಮಹತ್ವಾಕಾಂಕ್ಷಿ ಚಿತ್ರ ‘Toxic: A Fairy Tale for Grown-ups’ ಆಗಸ್ಟ್ 26ರಂದು ಜಾಗತಿಕವಾಗಿ ಅದ್ದೂರಿಯಾಗಿ ತೆರೆಗೆ ಬಂದಿದೆ. ರಿಲೀಸ್ ಆದ ಮೊದಲ ದಿನವೇ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಚರಿತ್ರೆಯಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರ, ಎರಡನೇ ದಿನ ಕೊಂಚ ಇಳಿಕೆ ಕಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು (Mixed Response) ಮತ್ತು ಹೆಟೇರ್ಸ್‌ಗಳ ನೆಗೆಟಿವ್ ಪ್ರಚಾರದ ನಡುವೆಯೂ ಯಶ್ ಅವರ ಬಾಕ್ಸಾಫೀಸ್ ಸ್ಟಾಮ್ ಕಡಿಮೆಯಾಗಿಲ್ಲ.
ಎರಡನೇ ದಿನದ ಕಲೆಕ್ಷನ್ ಲೆಕ್ಕಾಚಾರ: ಎಲ್ಲೆಲ್ಲಿ ಎಷ್ಟು?
Sacnilk ನೀಡಿರುವ ಅಂಕಿ-ಅಂಶಗಳ ಪ್ರಕಾರ, ಮೊದಲ ದಿನ ಭಾರತದಲ್ಲಿ ಬರೋಬ್ಬರಿ ₹101.10 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದ ಚಿತ್ರ, ಎರಡನೇ ದಿನ (ಗುರುವಾರ) ದೇಶಾದ್ಯಂತ ₹36.40 ಕೋಟಿ ನೆಟ್ (Net) ಗಳಿಸಿದೆ.
ಹಿಂದಿ: ₹23.00 ಕೋಟಿ
ಕನ್ನಡ: ₹8.50 ಕೋಟಿ
ತೆಲುಗು: ₹3.00 ಕೋಟಿ
ತಮಿಳು: ₹1.50 ಕೋಟಿ
ಮಲಯಾಳಂ: ₹0.40 ಕೋಟಿ
ಆಶ್ಚರ್ಯಕರ ಸಂಗತಿಯೆಂದರೆ, ಸ್ವದೇಶಿ ಕನ್ನಡ ಮಾರುಕಟ್ಟೆಗಿಂತಲೂ ಹಿಂದಿ ಬೆಲ್ಟ್‌ನಲ್ಲಿ ‘ಟಾಕ್ಸಿಕ್’ ಅಬ್ಬರ ಮುಂದುವರಿದಿದೆ. 2ನೇ ದಿನವೇ ಹಿಂದಿಯಲ್ಲಿ ₹23 ಕೋಟಿ ಗಳಿಸುವ ಮೂಲಕ ಯಶ್ ತಮ್ಮ ಅಖಿಲ ಭಾರತ ಕ್ರೇಜ್ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತೆಲುಗಿನಲ್ಲಿ ₹3 ಕೋಟಿ ಗಳಿಸಿದ್ದರೆ, ತಮಿಳು ಹಾಗೂ ಮಲಯಾಳಂನಲ್ಲಿ ಕಲೆಕ್ಷನ್ ಕೊಂಚ ಮಂದಗತಿಯಲ್ಲಿದೆ.
ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಥಿಯೇಟರ್; ಮಾಸ್ ಆಕ್ಯುಪೆನ್ಸಿ
ಒರಿಜಿನಲ್ ಕಥಾಹಂದರ ಹಾಗೂ ಬೋಲ್ಡ್ ಮೇಕಿಂಗ್‌ನಿಂದ ಗಮನಸೆಳೆದಿರುವ ಈ ಚಿತ್ರಕ್ಕೆ ಕೇವಲ ಬೆಂಗಳೂರಿನಲ್ಲೇ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಿಕ್ಕಿತ್ತು. ರಾಜ್ಯಾದ್ಯಂತ ಮುಂಜಾನೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿದ್ದವು.
ಚಿತ್ರದ ಬೋಲ್ಡ್ ಶೈಲಿ ಹಾಗೂ ಸಿನಿಮಾ ಗ್ರಾನ್ಸ್ ದಾಟಿದ ಪ್ರಯೋಗಕ್ಕೆ ವಿಮರ್ಶಕರು ಮತ್ತು ಯಶ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 2ನೇ ದಿನ ಥಿಯೇಟರ್ ಆಕ್ಯುಪೆನ್ಸಿ ಶೇ. 26.6% ಗೆ ಇಳಿದಿದ್ದರೂ, ವೀಕೆಂಡ್ (ಶನಿವಾರ ಮತ್ತು ಭಾನುವಾರ) ಬರುವ ಹೊತ್ತಿಗೆ ಕಲೆಕ್ಷನ್ ಮತ್ತೆ ರಾಕೆಟ್ ವೇಗ ಪಡೆಯುವ ಸಾಧ್ಯತೆಯಿದೆ.
ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಚರ್ಚೆ-ವಿವಾದಗಳು ನಡೆದರೂ, ಗಲ್ಲಾಪೆಟ್ಟಿಗೆಯಲ್ಲಿ ರಾಕಿ ಭಾಯ್ ಸುನಾಮಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ

