ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಭರ್ಜರಿ ದಾಖಲೆ ನಿರ್ಮಿಸಿದ್ದು, ಬೆಂಗಳೂರು ನಗರದಲ್ಲಿ ಮೊದಲ ದಿನದ ಪ್ರದರ್ಶನಗಳ ಸಂಖ್ಯೆಯಲ್ಲಿ ಮೊದಲ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಅಗ್ರಸ್ಥಾನದಲ್ಲಿದ್ದ ಪುಷ್ಪ ಚಿತ್ರವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಳ್ಳಿದೆ.
ಕೆಎ ಟಾಕೀಸ್ ಎಂಬ ಕನ್ನಡದ ಖ್ಯಾತ ಸಿನಿಮಾ ಪೇಜ್ ಪ್ರಕಾರ ಬೆಂಗಳೂರಿನಲ್ಲಿ ಮೊದಲ ದಿನ ಬರೋಬ್ಬರಿ 1,428 ಶೋಗಳೊಂದಿಗೆ ‘ಟಾಕ್ಸಿಕ್’ ಆಲ್‌ಟೈಮ್ ನಂ.1 ಸ್ಥಾನಕ್ಕೇರಿದೆ.
ಈ ಮೂಲಕ ‘ಟಾಕ್ಸಿಕ್’ ಅಲ್ಲು ಅರ್ಜುನ್ ಅಭಿನಯದ ಬ್ಲಾಕ್‌ಬಸ್ಟರ್ ‘ಪುಷ್ಪ 2’ ದಾಖಲೆಯನ್ನು ಹಿಂದಿಕ್ಕಿದೆ. ‘ಪುಷ್ಪ 2’ ಬೆಂಗಳೂರಿನಲ್ಲಿ ಬಿಡುಗಡೆ ದಿನದಂದು 1,405 ಶೋಗಳನ್ನು ಹೊಂದಿತ್ತು, ‘ಟಾಕ್ಸಿಕ್’ 1,428 ಶೋಗಳೊಂದಿಗೆ ಹೊಸ ದಾಖಲೆ ಬರೆದಿದೆ. ಅಂದರೆ, ‘ಟಾಕ್ಸಿಕ್’ 23 ಶೋಗಳ ಅಂತರದಲ್ಲಿ ‘ಪುಷ್ಪ 2’ ಅನ್ನು ಹಿಂದಿಕ್ಕಿದೆ.
ಈ ಪಟ್ಟಿಯಲ್ಲಿ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ 1,333 ಶೋಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ವಿಜಯ್ ಅಭಿನಯದ ‘ಗೋಟ್’ 1,237 ಶೋಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ 1,175 ಶೋಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ‘ಪುಷ್ಪ 2’ನಂತಹ ಬಿಗ್‌ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದ ದಾಖಲೆಯನ್ನು ‘ಟಾಕ್ಸಿಕ್’ ಹಿಂದಿಕ್ಕಿರುವುದು ಯಶ್ ಅಭಿಮಾನಿಗಳಲ್ಲಿ ಭರ್ಜರಿ ಸಂಭ್ರಮಕ್ಕೆ ಕಾರಣವಾಗಿದೆ. ಚಿತ್ರದ ಮೇಲಿನ ನಿರೀಕ್ಷೆ ಹಾಗೂ ಕ್ರೇಜ್ ಎಷ್ಟರಮಟ್ಟಿಗಿದೆ ಎಂಬುದಕ್ಕೆ ಈ ಶೋ ಕೌಂಟ್ ಮತ್ತೊಂದು ಸಾಕ್ಷಿಯಾಗಿದೆ.

