ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿ.(ಐಆರ್‍ಸಿಟಿಸಿ) ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಸಾರ್ವಜನಿಕ ಉದ್ಯಮ ಆಗಿದ್ದು, ಈ ಬಾರಿ ಕರ್ನಾಟಕದ ಭಕ್ತರು ಹಾಗೂ ಪ್ರವಾಸಿಗರಿಗಾಗಿ ‘ಹರಿ ಹರ ದರ್ಶನ ಯಾತ್ರಾ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ವೀಕ್ಷಣೆ’ ಎಂಬ 10 ರಾತ್ರಿ/11 ಹಲಗಲುಗಳ ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು ಆಯೋಜಿಸಿದೆ.
ಈ ವಿಶೇಷ ರೈಲು 2021 ರ ಡಿಸೆಂಬರ್ 10 ರಂದು ಮದುರೈ ರೈಲು ನಿಲ್ದಾಣದಿಂದ ಹೊರಟು, ಬೆಂಗಳೂರು, ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮಾರ್ಗವಾಗಿ ಹೋಗಲಿದೆ. ಈ ರೈಲಿನಲ್ಲಿ ಅಹಮದಾಬಾದ್-ಅಕ್ಷರ್ ಧಾಮ್ ಮಂದಿರ್-ನಿಶಕಳಂಕ ಮಹಾದೇವ-ದ್ವಾರಕಾ-ಬೆಟ್ ದ್ವಾರಕಾ-ನಾಗೇಶ್ವರ್ (ಜ್ಯೋತಿರ್ಲಿಂಗ)-ಸೋಮನಾಥ, (ಜ್ಯೋತಿರ್ಲಿಂಗ)-ಉಜ್ಜಯಿನಿ, ಮಹಾಕಾಳೇಶ್ವರ (ಜ್ಯೋತಿರ್ಲಿಂಗ), ಓಂಕಾರೇಶ್ವರ (ಜ್ಯೋತಿರ್ಲಿಂಗ) ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿ ವೀಕ್ಷಣೆ ಈ ಎಲ್ಲ ದೇವಸ್ಥಾನ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ.
ಈ ಪ್ರವಾಸಕ್ಕೆ ಒಟ್ಟು 11,435 ರೂ. ವೆಚ್ಚ ತಗುಲುತ್ತದೆ. ಈ ವಿಶೇಷ ಪ್ರವಾಸಿ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ರೈಲು ಪ್ರಯಾಣ, ರಾತ್ರಿ ಉಳಿಯಲು ಅಥವಾ ಫ್ರೆಶ್ ಆಗಲು ಧರ್ಮಶಾಲ/ಹಾಲ್/ಡಾರ್ಮಿಟರಿಸ್ ವ್ಯವಸ್ಥೆ ಬಹು ಹಂಚಿಕೆ ಆಧಾರದ ಮೇಲೆ ನೀಡಲಾಗುವುದು ಹಾಗೂ ಇತರೆ ಸೇವೆಗಳು ಲಭ್ಯವಿದೆ.
ಪ್ರವಾಸದ ಹೊರತಾಗಿ ಐಆರ್‍ಸಿಟಿಸಿ ನವೆಂಬರ್ 16 ರಂದು ರಾಮಾಯಣ ಯಾತ್ರಾ ಪ್ರವಾಸಿ ರೈಲುಪ್ರವಾಸಕ್ಕೆ ತಗಲುವ ಒಟ್ಟು ವೆಚ್ಚ 14,490 ರೂ. ಆಗಿದೆ. ಮತ್ತು ಇತರೆ ದೇಶೀಯ ವಿಮಾನ ಪ್ಯಾಕೇಜ್‍ಗಳನ್ನು ಜನಪ್ರಿಯ ಪ್ರವಾಸೋದ್ಯಮ ಸ್ಥಳಗಳಿಗೆ ಪ್ರಾರಂಭಿಸಿದೆ. ಇದರಲ್ಲಿ ವಿಮಾನ ದರ 3 ಸ್ಟಾರ್ ವರ್ಗದ ಹೋಟೆಲ್, ಆಹಾರ, ಪ್ರವಾಸದ ವ್ಯವಸ್ಥಾಪಕರು ಇತ್ಯಾದಿ ಪ್ಯಾಕೇಜ್‍ನ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ.
ಶ್ರೀ ರಾಮಾಯಣ ಯಾತ್ರೆ(13 ರಾತ್ರಿಗಳು/14 ದಿನಗಳು)ಗೆ 2021 ರ ನವೆಂಬರ್ 16 ರಂದು ಹೊರಡುವ ದಿನವಾಗಿದ್ದು ಹಂಪಿ-ನಾಸಿಕ್-ಚಿತ್ರಕೂಟ್ ಧಾಮ್-ವಾರಣಾಸಿ-ಗಯಾ-ಸೀತಾಮರ್ಹಿ-ಜನಕ್‍ಪುರ(ನೇಪಾಳ)-ಅಯೋಧ್ಯೆ-ನಂದಿಗ್ರಾಮ್-ಪ್ರಯಾಗ್‍ರಾಜ್-ಶೃಂಗವೇರಪುರ ಸ್ಥಳಗಳಿಗೆ ಭೇಟಿ ನೀಡಲಾಗುವುದು. 2022 ರ ಜನವರಿ 21 ರಂದು ಕಾಶಿ ಮತ್ತು ಪ್ರಯಾಗ್‍ರಾಜ್‍ನೊಂದಿಗೆ ಪವಿತ್ರ ಅಯೋಧ್ಯ(5 ರಾತ್ರಿಗಳು/6 ದಿನಗಳು) ವಾರಣಾಸಿ-ಸಾರನಾಥ್-ಪ್ರಯಾಗರಾಜ್-ಅಯೋಧ್ಯ ಮತ್ತು ಲಕ್ನೋ ಭೇಟಿ ನೀಡಲಾಗುವುದು.
ಅಂಡಮಾನ್(5 ರಾತ್ರಿಗಳು/6 ದಿನಗಳು)ಗೆ 2022 ರ ಜನವರಿ 31 ಕ್ಕೆ ಹೊರಡುವ ದಿನ ಪೋರ್ಟ್‍ಬ್ಲೇರ್, ಹ್ಯಾವ್ಲಾಕ್, ನೀಲ್, ರೋಸ್ ಅಂಡ್ ನಾರ್ತ್ ಬೇ ಐಲ್ಯಾಂಡ್ಸ್ ಗೆ ಭೇಟಿ ನೀಡಲಾಗುವುದು. ಅಸ್ಸಾಂ ಮತ್ತು ಮೇಘಾಲಯ(5 ರಾತ್ರಿಗಳು/ದಿನಗಳು) 2022 ರ ಫೆಬ್ರವರಿ ಕ್ಕೆ ಹೊರಡುವ ದಿನವಾಗಿದ್ದು, ಶಿಲ್ಲಾಂಗ್, ಚಿರಾಪುಂಜಿ-ಕಾಜಿರಂಗ ರಾಷ್ಟ್ರೀಯ ಉದ್ಯಾನವನ-ಗುವಾಹಟಿಗೆ ಭೇಟಿ ನೀಡಲಾಗುವುದು. ಗುಜರಾತ್(6 ರಾತ್ರಿಗಳು/7 ದಿನಗಳು)ಗೆ 2022 ರ ಫೆಬ್ರವರಿ 18 ಕ್ಕೆ ಹೊರಡುವ ದಿನವಾಗಿದ್ದು ಅಹಮದಾಬಾದ್-ದ್ವಾರಕಾ-ಬೆಟ್, ದ್ವಾರಕಾ-ನಾಗೇಶ್ವರ್-ಸೋಮನಾಥ್-ಪೋರಬಂದರ್-ನಿಷ್ಕಲಂಕ್ ಮಹಾದೇವ್-ಏಕತೆಯ ಪ್ರತಿಮೆ ಇಲ್ಲಿಗೆ ಭೇಟಿ ನಿಡಲಾಗುವುದು.
ಈ ಪ್ರವಾಸಕ್ಕಾಗಿ ಕೇಂದ್ರ/ರಾಜ್ಯ ಸರ್ಕಾರಿ ನೌಕರರು ಎಲ್.ಟಿ.ಸಿ ಸೌಲಭ್ಯ ಕೂಡ ಪಡೆಯಬಹುದು. ಮೇಲಿನ ಪ್ರವಾಸಕ್ಕಾಗಿ ಐಆರ್‍ಸಿಟಿಸಿ ಕೌಂಟರ್‍ಗಳಲ್ಲಿ ಮತ್ತು ಆನ್‍ಲೈನ್ www.irctctourism.com ವೆಬ್‍ಸೈಟ್ ಮೂಲಕ ಬುಕಿಂಕ್ ಪ್ರಾರಂಭಿಸಲಾಗಿದೆ. ಬುಕಿಂಗ್ ಅಥವಾ ವಿವರಗಳಿಗಾಗಿ ಪ್ರಾದೇಶಿಕ ಕಚೇರಿ, ರಾಜಾಜಿನಗರ ಬೆಂಗಳೂರು 8595931291, 8595931292, ಹುಬ್ಬಳ್ಳಿ ರೈಲು ನಿಲ್ದಾಣ 8595931293, ಮೈಸೂರು ರೈಲು ನಿಲ್ದಾಣ 8595931294 ನ್ನು ಸಂಪರ್ಕಿಸಬಹುದೆಂದು ಐಆರ್‍ಸಿಟಿಸಿ ಪ್ರಾದೇಶಿಕ ವ್ಯವಸ್ಥಾಪಕರು ತಿಳಿಸಿದ್ದಾರೆ.