alex Certify ಈ 16 ದೇಶಗಳಿಗೆ ಹೋಗಲು ಭಾರತೀಯರಿಗೆ ಬೇಕಿಲ್ಲ ʼವೀಸಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 16 ದೇಶಗಳಿಗೆ ಹೋಗಲು ಭಾರತೀಯರಿಗೆ ಬೇಕಿಲ್ಲ ʼವೀಸಾʼ

 नई दिल्ली. राज्यसभा को एक लिखित जवाब में मुरलीधरन ने बताया कि 43 देश वीजा-ऑन-अराइवल सुविधा प्रदान करते हैं और 36 देश भारतीय साधारण पासपोर्ट धारकों को ई-वीजा सुविधा प्रदान करते हैं.

ವಿದೇಶಕ್ಕೆ ಪ್ರಯಾಣ ಬೆಳೆಸಲು ವೀಸಾ ಅವಶ್ಯಕತೆಯಿರುತ್ತದೆ. ಆದ್ರೆ 16 ದೇಶಗಳನ್ನು ಸುತ್ತಲು ಭಾರತೀಯರಿಗೆ ವೀಸಾ ಅವಶ್ಯಕತೆಯಿಲ್ಲ. ಭಾರತದ ಪಾಸ್ ಪೋರ್ಟ್ ಹೊಂದಿದವರು ವೀಸಾ ಮುಕ್ತ ಪ್ರಯಾಣ ಬೆಳೆಸಬಹುದು. ರಾಜ್ಯಸಭೆಯಲ್ಲಿ ವಿ. ಮುರಳೀಧರನ್ ಲಿಖಿತ ಉತ್ತರ ನೀಡುವ ವೇಳೆ ಈ ವಿಷ್ಯ ತಿಳಿಸಿದ್ದಾರೆ. 43 ದೇಶಗಳು ವೀಸಾ ಆನ್ ಅರೈವಲ್ ಸೌಲಭ್ಯವನ್ನು ಒದಗಿಸುತ್ತವೆ ಮತ್ತು 36 ದೇಶಗಳು ಭಾರತೀಯ ಸಾಮಾನ್ಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಇ-ವೀಸಾ ಸೌಲಭ್ಯವನ್ನು ಒದಗಿಸುತ್ತವೆ ಎಂದಿದ್ದಾರೆ.

ಬಾರ್ಬಡೋಸ್, ಭೂತಾನ್, ಡೊಮಿನಿಕಾ, ಗ್ರೆನೆಡಾ, ಹೈತಿ, ಹಾಂಕಾಂಗ್ ಎಸ್‌ಎಆರ್, ಮಾಲ್ಡೀವ್ಸ್, ಮಾರಿಷಸ್, ಮಾಂಟ್ಸೆರಾಟ್, ನೇಪಾಳ, ನಿಯೂ ಐಲ್ಯಾಂಡ್, ಸಮೋಆ, ಸೆನೆಗಲ್, ಟ್ರಿನಿಡಾಡ್- ಟೊಬ್ಯಾಗೊ, ಸೇಂಟ್ ವಿನ್ಸೆಂಟ್ – ಗ್ರೆನೆಡೀನ್ಸ್, ಸರ್ಬಿಯಾ ದೇಶಗಳಿಗೆ ಪ್ರಯಾಣ ಬೆಳೆಸಲು ವೀಸಾ ಅಗತ್ಯವಿರುವುದಿಲ್ಲ.

ಕೇಂದ್ರ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ವೀಸಾ ಆನ್ ಅರೈವಲ್ ಸೌಲಭ್ಯವನ್ನು ಒದಗಿಸುವ ದೇಶಗಳಲ್ಲಿ ಇರಾನ್, ಇಂಡೋನೇಷ್ಯಾ ಮತ್ತು ಮ್ಯಾನ್ಮಾರ್ ಸೇರಿವೆ. ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಮಲೇಷ್ಯಾ ಸೇರಿ 36 ದೇಶಗಳು ಇ- ವೀಸಾ ಸೌಲಭ್ಯ ಒದಗಿಸುತ್ತವೆ.

ಅಂತರರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸುವ ಉದ್ದೇಶದಿಂದ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣ, ವೀಸಾ-ಆನ್-ಅರೈವಲ್ ಮತ್ತು ಇ-ವೀಸಾ ಸೌಲಭ್ಯವನ್ನು ನೀಡುವ ದೇಶಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...