HomeAgricultureರೈತನಿಗೆ ಖುಲಾಯಿಸಿದ ಅದೃಷ್ಟ: ದಾಖಲೆಯ ಬೆಲೆಗೆ ಮಾರಾಟವಾಯ್ತು ಟೊಮೆಟೊ: 15 ಕೆಜಿಗೆ 2200 ರೂ.

ರೈತನಿಗೆ ಖುಲಾಯಿಸಿದ ಅದೃಷ್ಟ: ದಾಖಲೆಯ ಬೆಲೆಗೆ ಮಾರಾಟವಾಯ್ತು ಟೊಮೆಟೊ: 15 ಕೆಜಿಗೆ 2200 ರೂ.

ಕೋಲಾರ: ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ದಾಖಲೆಯ ಬೆಲೆಗೆ ಮಾರಾಟವಾಗಿದೆ. 15 ಕೆಜಿ ಟೊಮೆಟೊ ಬಾಕ್ಸ್ 2200 ರೂ.ಗೆ ಹರಾಜಾಗಿದೆ.

ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ವೆಂಕಟರಮಣ ಅವರು ತಂದಿದ್ದ 15 ಕೆಜಿ ಟೊಮೆಟೊ ಬಾಕ್ಸ್ ಕೋಲಾರ ಎಪಿಎಂಸಿಯಲ್ಲಿ 2200 ರೂ.ಗೆ ಹರಾಜಾಗಿದ್ದು ದಾಖಲೆ ಬರೆದಿದೆ. ವೆಂಕಟರಮಣ ಅವರು ತಂದಿದ್ದ 36 ಬಾಕ್ಸ್ ಗಳು ತಲಾ 2200 ರೂ.ಗೆ ಮಾರಾಟವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ 5 ವರ್ಷಗಳಲ್ಲಿ ಇದು ದಾಖಲೆಯ ಬೆಲೆಯಾಗಿದೆ. ಕೋಲಾರ ಎಪಿಎಂಸಿ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾಗಿದೆ. ಒಂದು ಕೆಜಿ ಟೊಮೆಟೊ ದರ ಸರಾಸರಿ 150 ರೂ. ಇದ್ದು, ಒಂದು ಟೊಮೆಟೊ ಬೆಲೆ 15 ರೂಪಾಯಿವರೆಗೂ ಇದೆ. ಅತಿವೃಷ್ಟಿ, ಹವಾಮಾನ ವೈಪರೀತ್ಯ, ರೋಗ ಬಾಧೆ ಮೊದಲಾದ ಕಾರಣದಿಂದ ಟೊಮೆಟೊ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದ್ದು, ದರ ಏರುಗತಿಯಲ್ಲಿ ಸಾಗಿದೆ. ಬೆಳೆಗಾರರಿಗೆ ಬಂಪರ್ ಬೆಲೆ ಸಿಗುತ್ತಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular