ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸ, ತುಲಾ ಸೌರಮಾಸ. ಇಂದು ಸೋಮವಾರ, ಶುಕ್ಲ ಪಕ್ಷದ ಪೂರ್ಣಿಮೆ. ಚಿತ್ರಾ ಮಹಾನಕ್ಷತ್ರ, ಭರಣಿ ನಿತ್ಯನಕ್ಷತ್ರ, ವಜ್ರ ಯೋಗ ಮತ್ತು ಬಾಲವ ಕರಣವಿದೆ.
ಇಂದಿನ ಶುಭಾಶುಭ ಸಮಯ
ಸೂರ್ಯೋದಯ: ಬೆಳಗ್ಗೆ 6:12
ಸೂರ್ಯಾಸ್ತ: ಸಂಜೆ 5:54
ರಾಹುಕಾಲ: ಬೆಳಗ್ಗೆ 7:40ರಿಂದ 9:08ರವರೆಗೆ
ಯಮಗಂಡ ಕಾಲ: ಬೆಳಗ್ಗೆ 10:36ರಿಂದ ಮಧ್ಯಾಹ್ನ 12:03ರವರೆಗೆ
ಗುಳಿಕ ಕಾಲ: ಮಧ್ಯಾಹ್ನ 1:31ರಿಂದ 2:59ರವರೆಗೆ
ಇಂದಿನ 12 ರಾಶಿಗಳ ಫಲ ಹೇಗಿದೆ?
ಮೇಷ ರಾಶಿ
ಇಂದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಂಡು ಶಾಂತವಾಗಿರಲು ಪ್ರಯತ್ನಿಸುವುದು ಉತ್ತಮ. ಕೆಲವರ ವರ್ತನೆಯಿಂದ ನೆಮ್ಮದಿಗೆ ಭಂಗ ಉಂಟಾಗಬಹುದು. ವೃತ್ತಿಪರರಿಗೆ ಕೆಲಸದ ಸ್ಥಳದಿಂದ ಅನಿರೀಕ್ಷಿತ ಸುದ್ದಿ ಬರುವ ಸಾಧ್ಯತೆ ಇದೆ. ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ತೃಪ್ತಿ ಸಿಗಬಹುದು. ಇತರರ ವಸ್ತುಗಳನ್ನು ಬಳಸುವಾಗ ಅನುಮತಿ ಪಡೆಯಿರಿ.
ವೃಷಭ ರಾಶಿ
ಹಣಕಾಸಿನ ವಿಚಾರಗಳಲ್ಲಿ ನಿರೀಕ್ಷಿತ ಫಲ ಸುಲಭವಾಗಿ ಸಿಗದೇ ಇರಬಹುದು. ಕ್ರೀಡೆ ಮತ್ತು ಮನರಂಜನೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಇಷ್ಟದ ವ್ಯಕ್ತಿಗಳನ್ನು ಆಕಸ್ಮಿಕವಾಗಿ ಭೇಟಿಯಾಗುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಬಹುದು. ಸಂಗಾತಿಯೊಂದಿಗೆ ಮಾತನಾಡುವಾಗ ಅವರ ಭಾವನೆಗಳಿಗೂ ಗೌರವ ನೀಡಿ.
ಮಿಥುನ ರಾಶಿ
ಉದ್ಯೋಗ ಹುಡುಕುತ್ತಿರುವವರಿಗೆ ನಿರೀಕ್ಷಿತ ಅವಕಾಶ ಸಿಗಲು ಸ್ವಲ್ಪ ಸಮಯ ಹಿಡಿಯಬಹುದು. ಉದ್ಯಮ ವಿಸ್ತರಣೆಗೆ ಪಾಲುದಾರರಿಂದ ಅಗತ್ಯ ಸಹಕಾರ ದೊರೆಯದಿರಬಹುದು. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವಿದ್ಯಾದಾನಕ್ಕೆ ಅವಕಾಶ ಸಿಗಬಹುದು. ಸಹೋದ್ಯೋಗಿಗಳ ವರ್ತನೆ ಕಿರಿಕಿರಿ ಉಂಟುಮಾಡಿದರೂ ತಾಳ್ಮೆಯಿಂದ ವರ್ತಿಸುವುದು ಉತ್ತಮ.
ಕರ್ಕಾಟಕ ರಾಶಿ
ನಿಮ್ಮ ಮಾತುಗಳಿಂದ ಇತರರಿಗೆ ನೋವಾಗದಂತೆ ಎಚ್ಚರಿಕೆ ವಹಿಸಿ. ಗುರಿ ಸಾಧಿಸಲು ಹೆಚ್ಚಿನ ಪ್ರಯತ್ನ ಅಗತ್ಯವಾಗಬಹುದು. ನಿಮ್ಮ ಸಾಧನೆಗೆ ಗೌರವ ದೊರೆಯುವ ಸಾಧ್ಯತೆ ಇದೆ. ವಿವಾಹಕ್ಕಾಗಿ ಉತ್ತಮ ಸಂಬಂಧ ಬಂದರೆ ಆತುರದ ನಿರ್ಧಾರ ತೆಗೆದುಕೊಳ್ಳದೆ ಸೂಕ್ತವಾಗಿ ಪರಿಶೀಲಿಸಿ. ಸಣ್ಣಪುಟ್ಟ ವಿಚಾರಗಳನ್ನು ಬದಿಗಿಟ್ಟು ಸಂತೋಷದಿಂದ ಸಮಯ ಕಳೆಯಿರಿ.
ಸಿಂಹ ರಾಶಿ
ಗಳಿಸಿದ ಹಣ ಸಾಲ ತೀರಿಸಲು ಬಳಕೆಯಾಗಬಹುದು. ಸಹೋದ್ಯೋಗಿಗಳಿಂದ ತಪ್ಪು ನಿರ್ಧಾರಗಳಿಗೆ ಪ್ರೇರಣೆ ಸಿಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಪರೀಕ್ಷೆಯ ಫಲಿತಾಂಶ ಸಂತೋಷ ತರಬಹುದು. ಹಿಂದೆ ಕಲಿತಿದ್ದ ವಿದ್ಯೆ ಇಂದು ಉಪಯೋಗಕ್ಕೆ ಬರಲಿದೆ. ಯಾವುದೇ ವಿಷಯವನ್ನು ಪೂರ್ವಾಗ್ರಹವಿಲ್ಲದೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಿ.
ಕನ್ಯಾ ರಾಶಿ
ತಾಳ್ಮೆಯಿಂದ ವರ್ತಿಸುವುದರಿಂದ ದಿನವನ್ನು ಸಂತೋಷದಿಂದ ಕಳೆಯಬಹುದು. ಮನೆಯ ವಾತಾವರಣ ನೆಮ್ಮದಿ ನೀಡಲಿದೆ. ಭೂ ವ್ಯವಹಾರಗಳಲ್ಲಿ ಹಣಕಾಸಿನ ನಷ್ಟವಾಗದಂತೆ ಎಚ್ಚರಿಕೆ ವಹಿಸಿ. ನಿಮ್ಮ ಮಾತುಗಳಿಂದ ಇತರರ ಕೋಪ ಕಡಿಮೆಯಾಗಬಹುದು. ನಿಮ್ಮ ವಿರುದ್ಧ ಕೇಳಿಬರುವ ಆರೋಪಗಳಿಗೆ ಸೂಕ್ತ ಉತ್ತರ ನೀಡಲು ಪ್ರಯತ್ನಿಸುವಿರಿ.
ತುಲಾ ರಾಶಿ
ವಿದ್ಯಾರ್ಥಿಗಳಿಗೆ ಬಹುದಿನಗಳ ಕನಸು ನನಸಾಗುವ ಅವಕಾಶ ದೊರೆಯಬಹುದು. ಸಂಗಾತಿಯ ಮಾತುಗಳು ನಿಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು. ಮನಸ್ಸಿನ ನೋವನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ ಸಮಾಧಾನ ಸಿಗಲಿದೆ. ಕೆಲಸದಲ್ಲಿ ಯಶಸ್ಸು ಪಡೆಯಲು ಸ್ವಾಭಿಮಾನಕ್ಕಿಂತ ಕರ್ತವ್ಯಕ್ಕೆ ಆದ್ಯತೆ ನೀಡಿ. ಅನಿರೀಕ್ಷಿತ ಬೆಳವಣಿಗೆಯಿಂದ ನಿಮ್ಮ ಗುರಿಯಲ್ಲಿ ಬದಲಾವಣೆಯಾಗಬಹುದು.
ವೃಶ್ಚಿಕ ರಾಶಿ
ವಾಗ್ವಾದಗಳಿಂದ ನಿಮ್ಮ ಗೌರವಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿ. ಹಠದ ಸ್ವಭಾವವನ್ನು ಕಡಿಮೆ ಮಾಡಿಕೊಂಡು ಇತರರ ಅಭಿಪ್ರಾಯಗಳಿಗೂ ಮನ್ನಣೆ ನೀಡಿ. ಅನಿರೀಕ್ಷಿತ ಘಟನೆಗಳು ಆತಂಕ ಉಂಟುಮಾಡಬಹುದು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಲಿದ್ದಾರೆ. ವಿರೋಧ ವ್ಯಕ್ತಪಡಿಸುವ ಸಂದರ್ಭದಲ್ಲೂ ಸೌಜನ್ಯದಿಂದ ಮಾತನಾಡುವುದು ಉತ್ತಮ.
ಧನು ರಾಶಿ
ಇಂದು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಇತರರ ಮೆಚ್ಚುಗೆ ಪಡೆಯಲು ಪ್ರಯತ್ನಿಸುವಿರಿ. ಅಪರಿಚಿತರಿಂದ ಪದೇಪದೇ ಕರೆಗಳು ಬಂದರೆ ಮಾನಸಿಕ ಒತ್ತಡ ಉಂಟಾಗಬಹುದು. ಹೊಸ ಯೋಜನೆಗಳನ್ನು ಆರಂಭಿಸುವಾಗ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳುವ ಆಲೋಚನೆ ಬರಬಹುದು. ಅನಗತ್ಯ ಕಾರ್ಯಗಳಿಗೆ ಇತರರ ಒತ್ತಡಕ್ಕೆ ಮಣಿಯಬೇಡಿ.
ಮಕರ ರಾಶಿ
ವಿದ್ಯಾರ್ಥಿಗಳು ಅನಗತ್ಯ ಚಟುವಟಿಕೆಗಳಲ್ಲಿ ಸಮಯ ಕಳೆಯುತ್ತಿದ್ದರೆ ಪೋಷಕರು ಗಮನ ಹರಿಸುವುದು ಸೂಕ್ತ. ಆಹಾರ ಪದ್ಧತಿಯಲ್ಲಿ ಎಚ್ಚರಿಕೆ ವಹಿಸಿ. ಕೆಲವರ ಮಾತುಗಳು ಉತ್ಸಾಹವನ್ನು ಕುಗ್ಗಿಸಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಆಸ್ತಿ ವಿಚಾರಗಳಲ್ಲಿ ತಾಳ್ಮೆಯಿಂದ ವರ್ತಿಸಿ. ಎಲ್ಲರನ್ನೂ ಅನುಮಾನಿಸುವುದನ್ನು ತಪ್ಪಿಸಿ.
ಕುಂಭ ರಾಶಿ
ಕಷ್ಟಕರವಾದ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವ ನಿಮ್ಮ ಸಾಮರ್ಥ್ಯಕ್ಕೆ ಮೆಚ್ಚುಗೆ ದೊರೆಯಬಹುದು. ಹಿರಿಯರೊಂದಿಗೆ ಮಾತನಾಡುವಾಗ ಭಿನ್ನಾಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳಿ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಧಾರ್ಮಿಕ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ನೀಡಬಹುದು. ಕೆಲಸದ ಒತ್ತಡದಿಂದ ಇತರರಿಗೆ ಸಹಾಯ ಮಾಡಲು ಸಮಯ ಸಿಗದಿರಬಹುದು.
ಮೀನ ರಾಶಿ
ಇತರರ ಮಾತುಗಳಿಂದ ಮನಸ್ಸಿಗೆ ನೋವಾಗಬಹುದು. ಪ್ರತಿಯೊಂದು ವಿಚಾರವನ್ನೂ ನಕಾರಾತ್ಮಕವಾಗಿ ಪರಿಗಣಿಸದೆ ಸಮಾಧಾನದಿಂದ ಆಲೋಚಿಸಿ. ಅತಿಥಿಗಳ ಆತಿಥ್ಯಕ್ಕೆ ಆದ್ಯತೆ ನೀಡುವಿರಿ. ಮಕ್ಕಳ ವಿವಾಹದ ವಿಚಾರ ಚಿಂತೆ ಉಂಟುಮಾಡಬಹುದು. ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಅಗತ್ಯ ಪರಿಶೀಲನೆ ನಡೆಸಿ. ವಂಚನೆಯಿಂದ ದೂರವಿದ್ದು, ಸಹಾಯ ಕೇಳಿಕೊಂಡು ಬಂದವರಿಗೆ ಸಾಧ್ಯವಾದಷ್ಟು ನೆರವು ನೀಡಿ.

