ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ತನ್ನ ಹ್ಯೂಮನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ವಿವಿಧ ಸ್ಪೆಷಲಿಸ್ಟ್ಆ ಫೀಸರ್(SO) ಹುದ್ದೆಗಳ ಭರ್ತಿಗೆ ಹೊರಡಿಸಿರುವ ಅಧಿಸೂಚನೆಗೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಲು ಅವಕಾಶವಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಐಟಿ ಮತ್ತು ತಾಂತ್ರಿಕ ಪದವೀಧರರಿಗೆ ಸುವರ್ಣಾವಕಾಶವೊಂದು ಇಂದಿಗೆ ಮುಕ್ತಾಯವಾಗಲಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ತನ್ನ ಹ್ಯೂಮನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಖಾಲಿ ಇರುವ 275 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು (ಮಾರ್ಚ್ 23, 2026) ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ:
ಒಟ್ಟು 275 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಈ ಕೆಳಗಿನ ಪ್ರಮುಖ ಐಟಿ ಮತ್ತು ತಾಂತ್ರಿಕ ಹುದ್ದೆಗಳು ಸೇರಿವೆ:
- ಸಾಫ್ಟ್‌ವೇರ್ ಡೆವಲಪರ್, ಮೊಬೈಲ್ ಡೆವಲಪರ್
- ಡೇಟಾಬೇಸ್ ಅಡ್ಮಿನಿಸ್ಟ್ರೇಷನ್, ಇನ್ಫರ್ಮೇಷನ್ ಸೆಕ್ಯೂರಿಟಿ
- ನೆಟ್‌ವರ್ಕ್ ಸೆಕ್ಯೂರಿಟಿ, ಡೇಟಾ ಆರ್ಕಿಟೆಕ್ಟ್
- ಡೇಟಾ ಸೈಂಟಿಸ್ಟ್, ಐಟಿ ಆಫೀಸರ್ ಮತ್ತು ರಿಸ್ಕ್ ಮ್ಯಾನೇಜರ್.
ಶೈಕ್ಷಣಿಕ ಅರ್ಹತೆ ಮತ್ತು ಅನುಭವ
- ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್ ಅಥವಾ ಸಂಬಂಧಿತ ವಿಭಾಗದಲ್ಲಿ ಬಿಇ/ಬಿ.ಟೆಕ್ ಅಥವಾ ಎಂಸಿಎ (MCA) ಪೂರ್ಣಗೊಳಿಸಿರಬೇಕು.
- ಹುದ್ದೆಗೆ ಅನುಗುಣವಾಗಿ 2 ರಿಂದ 10 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿ ಇರಬೇಕು.
ಸಂಬಳ ಮತ್ತು ಶುಲ್ಕ
- ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹48,480 ರಿಂದ ₹1,20,940 ವರೆಗೆ ವೇತನ ದೊರೆಯಲಿದೆ.
- ಅರ್ಜಿ ಶುಲ್ಕ: ನೋಂದಣಿ ಶುಲ್ಕವಾಗಿ ₹850 + ₹175 (ಜಿಎಸ್‌ಟಿ) ಪಾವತಿಸಬೇಕಾಗುತ್ತದೆ.
ಆಯ್ಕೆ ವಿಧಾನ:
- ಅಭ್ಯರ್ಥಿಗಳನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಪರೀಕ್ಷಾ ದಿನಾಂಕ: ಆನ್‌ಲೈನ್ ಪರೀಕ್ಷೆಯು ಏಪ್ರಿಲ್ 2026 ರಲ್ಲಿ ನಡೆಯಲಿದೆ.
ಪ್ರಮುಖ ದಿನಾಂಕ:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 23, 2026 (ಸೋಮವಾರ)

