ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಕರ್ನಾಟಕ ಬಿಜೆಪಿ ತಯಾರಿಯನ್ನು ನಡೆಸುತ್ತಿದೆ. ರಾಜ್ಯ ರಾಜಧಾನಿಯ ಅಧಿಕಾರ ಹಿಡಿಯಬೇಕು ಎಂದು ಪಕ್ಷ ತಂತ್ರ ರೂಪಿಸುತ್ತಿದೆ. 5 ನಗರ ಪಾಲಿಕೆ, 365 ವಾರ್ಡ್‌ಗಳಿಗೆ ಜೂನ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಕರ್ನಾಟಕ ಬಿಜೆಪಿ 5 ನಗರಸಭೆಗಳಿಗೆ ಅನ್ವಯವಾಗುವಂತೆ ರಾಜ್ಯ ತಂಡ, ಪ್ರತಿ ನಗರಸಭೆಗೆ ತಂಡ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳಿಗೆ ಪ್ರಮುಖರನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಆದೇಶವನ್ನು ಹೊರಡಿಸಿದ್ದಾರೆ. ಚುನಾವಣಾ ವೇಳಾಪಟ್ಟಿ ಯಾವಾಗ ಪ್ರಕಟವಾಗಲಿದೆ? ಎಂಬುದು ಇನ್ನೂ ಸಹ ಅಂತಿಮಗೊಂಡಿಲ್ಲ.
ಜಿಬಿಎ ರಾಜ್ಯ ತಂಡ
- ಬಿ.ವೈ.ವಿಜಯೇಂದ್ರ – ರಾಜ್ಯ ಅಧ್ಯಕ್ಷರು
- ಆರ್.ಅಶೋಕ – ವಿರೋಧ ಪಕ್ಷದ ನಾಯಕರು
- ಛಲವಾದಿ ನಾರಾಯಣಸ್ವಾಮಿ – ವಿರೋಧ ಪಕ್ಷದ ನಾಯಕರು
- ವಿ.ಸೋಮಣ್ಣ – ಕೇಂದ್ರ ಸಚಿವರು
- ಶೋಭಾ ಕರಂದ್ಲಾಜೆ – ಕೇಂದ್ರ ಸಚಿವರು
- ಎಸ್.ಸುರೇಶ್ ಕುಮಾರ್ – ಶಾಸಕರು
- ಡಾ.ಸಿ.ಎನ್.ಅಶ್ವಥ್ ನಾರಾಯಣ್ – ಶಾಸಕರು
- ಪಿ.ಸಿ.ಮೋಹನ್- ಸಂಸದರು
- ಡಾ.ಸಿ.ಎನ್.ಮಂಜುನಾಥ – ಸಂಸದರು
- ತೇಜಸ್ವಿ ಸೂರ್ಯ – ಸಂಸದರು
- ಡಾ.ಕೆ.ಸುಧಾಕರ್ – ಸಂಸದರು
- ಎನ್.ಎಸ್.ನಂದೀಶ್ ರೆಡ್ಡಿ – ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಬೆಂಗಳೂರು ಪೂರ್ವ ಪ್ರಾಧಿಕಾರ
- ಭೈರತಿ ಬಸವರಾಜ್ – ರಾಜ್ಯ ಉಪಾಧ್ಯಕ್ಷರು
- ಮಂಜುಳಾ ಅರವಿಂದ್ ಲಿಂಬಾವಳಿ – ಶಾಸಕರು
- ಎನ್. ರವಿಕುಮಾರ್ – ವಿಪಕ್ಷ ಮುಖ್ಯ ಸಚೇತಕರು, ವಿಧಾನ ಪರಿಷತ್
- ಎನ್.ಎಸ್. ನಂದೀಶ್ ರೆಡ್ಡಿ – ರಾಜ್ಯ ಪ್ರಧಾನ ಕಾರ್ಯದರ್ಶಿಗಳು

ಬೆಂಗಳೂರು ಉತ್ತರ ಪ್ರಾಧಿಕಾರ
- ಎಸ್.ಆರ್. ವಿಶ್ವನಾಥ್ – ಶಾಸಕರು
- ಎಸ್.ಮುನಿರಾಜು ದಾಸರಹಳ್ಳಿ- ಶಾಸಕರು
- ತಮ್ಮೇಶ ಗೌಡ – ರಾಜ್ಯ ಕಾರ್ಯದರ್ಶಿಗಳು
- ಭಾರತಿ ಶೆಟ್ಟಿ – ವಿಧಾನ ಪರಿಷತ್ ಸದಸ್ಯರು
- ಕಟ್ಟಾ ಸುಬ್ರಮಣ್ಯ ನಾಯ್ಡು – ಮಾಜಿ ಸಚಿವರು

ಬಿಜೆಪಿ ಉಸ್ತುವಾರಿಗಳು


