HomeEntertainment'ಗೌರಿ' ಚಿತ್ರದ ''ಟೈಮ್ ಬರುತ್ತೆ'' ವಿಡಿಯೋ ಹಾಡು ರಿಲೀಸ್

‘ಗೌರಿ’ ಚಿತ್ರದ ”ಟೈಮ್ ಬರುತ್ತೆ” ವಿಡಿಯೋ ಹಾಡು ರಿಲೀಸ್

ಸಮರ್ಜಿತ್ ಲಂಕೇಶ್ ನಟನೆಯ ‘ಗೌರಿ’ ಚಿತ್ರ ಮೊನ್ನೆಯಷ್ಟೇ  ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ‘ಟೈಮ್ ಬರುತ್ತೆ’ ಎಂಬ ಹಾಡು ಈಗಾಗಲೇ  ಭರ್ಜರಿ ಸೌಂಡ್ ಮಾಡಿದ್ದು, ಇದರ ವಿಡಿಯೋ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಈ ಹಾಡಿಗೆ ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ ಮತ್ತು ವಸುಂದರ ದಾಸ್ ಧ್ವನಿಯಾಗಿದ್ದು, ವರದ ರಾಜ್ ಚಿಕ್ಕಬಳ್ಳಾಪುರ, ಗುಬ್ಬಿ ಹಾಗೂ ವಿಜಯ್ ಈಶ್ವರ್ ಸಾಹಿತ್ಯವಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರದಲ್ಲಿ ಸಮರ್ಜಿತ್ ಸೇರಿದಂತೆ ಸನ್ಯಾ ಅಯ್ಯರ್, ಮಾನಸಿ ಸುಧೀರ್, ಸಂಪತ್ ಮೈತ್ರೇಯ, ರಾಜೀವ್ ಪಿಳ್ಳೈ ಬಣ್ಣ ಹಚ್ಚಿದ್ದು, ಕೆ ಎಂ ಪ್ರಕಾಶ್ ಸಂಕಲನ, ಏ ವಿ ಕೃಷ್ಣಕುಮಾರ್  ನೃತ್ಯ ನಿರ್ದೇಶನ, ಮತ್ತು ಬಿಎ ಮಧು, ರಾಜಶೇಖರ್ ಕೆ ಎಲ್, ಮಾಸ್ತಿ ಅವರ ಸಂಭಾಷಣೆ ಡಾಕ್ಟರ್ ಕೆ ರವಿವರ್ಮ ಹಾಗೂ ಡಿಫ್ರೆಂಟ್ ಡ್ಯಾನಿ ಸಾಹಸ ನಿರ್ದೇಶನವಿದೆ. ಲಾಫಿಂಗ್ ಬುದ್ಧ ಫಿಲಂಸ್ ಬ್ಯಾನರ್ ನಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular