HomeKarnatakaಹುಲಿಗಣತಿಗೆ ಅಳವಡಿಸಿದ್ದ ಸೆನ್ಸಾರ್ ಕ್ಯಾಮರಾ ಕದ್ದೊಯ್ದ ಕಳ್ಳರು

ಹುಲಿಗಣತಿಗೆ ಅಳವಡಿಸಿದ್ದ ಸೆನ್ಸಾರ್ ಕ್ಯಾಮರಾ ಕದ್ದೊಯ್ದ ಕಳ್ಳರು

ಶಿವಮೊಗ್ಗ: ಹುಲಿಗಣತಿಗೆ ಅಳವಡಿಸಲಾಗಿದ್ದ ಸೆನ್ಸಾರ್ ಕ್ಯಾಅಮಾರವನ್ನೇ ಕಳ್ಳತನ ಮಾಡಿರುವ ಗಹ್ಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಮಾರ್ಚ್ 1ರಿಂದ ಹುಲಿಗಣತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯದ ವಿದಿಧ ಆಯಕಟ್ಟಿನ ಭಾಗಗಳಲ್ಲಿ ಅತ್ಯಾಧುನಿಕ ಸೆನ್ಸಾರ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಸಕ್ರೆಬೈಲು ವನ್ಯಜೀವಿ ವಲಯದ ಸರ್ವೆ ನಂ.2ರಲ್ಲಿ ಅಳವಡಿಸಲಾಗಿದ್ದ ಎರಡು ಕ್ಯಾಮರಾಗಳು ಕಳ್ಳತನವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಆರ್ ಎಫ್ ಒ ಮಾರ್ಚ್ 2ರಂದು ಸ್ಥಳಕ್ಕೆ ಭೇಟಿ ನೀಡಿದಾಗ ಕ್ಯಾಮರಾಗಳು ಅಲ್ಲಿಯೇ ಇದ್ದವು. ಆದರೆ ಮಾರ್ಚ್ 22ರಂದು ಬೆಳಿಗ್ಗೆ ಸಿಬ್ಬಂದಿ ಪರಿಶೀಲನೆಗೆ ಹೋದಾಗ ಕ್ಯಾಮರಾಗಳು ನಾಪತ್ತೆಯಾಗಿವೆ. ಸುಮಾರು ೫೦ ಸಾವಿರ ಮೌಲ್ಯದ ಉಪಕರಣಗಳು ನಾಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಆದಾಗ್ಯೂ ಸಿಗದಿದ್ದಾಗ ದೂರು ನೀಡಿದ್ದಾರೆ.

ಮತ್ತೊಂದೆಡೆ ಶೆಟ್ಟಿಹಳ್ಳಿ ವನ್ಯಜೀವಿ ಭಾಗದ ಪುರದಾಳು ಗ್ರಾಮದ ಬಾರೆಹಳ್ಳ ಡ್ಯಾಂ ಬಳಿ ಸರ್ವೆ ನಂ.32ರ ಬಳಿ ಅಳವಡಿಸಿದ್ದ ೨೫ ಸಾವಿರ ರೂ ಮೌಲ್ಯದ ಕ್ಯಾಮಾರಗಳು ಕಳುವಾಗಿದೆ. ಹುಲಿಗಣತಿಗೆ ಅಳವಡಿಸಿದ್ದ ಮೆಮೊರಿ ಕಾರ್ಡ್ ಸಹಿತ ಸೆನ್ಸಾರ್ ಕ್ಯಾಮರಾವನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ಉಪವಲಯ ಅರಣ್ಯ ಅಧಿಕಾರಿಗಳು ಈ ಬಗ್ಗೆ ಶಿವಮೊಗ್ಗ ತುಂಗಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular