HomeKarnatakaಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ದಿನಕ್ಕೊಂದು ತಿರುವು: ಮತ್ತೆರಡು ವಿಡಿಯೋ ಬಿಡುಗಡೆ: ಕಾಂಗ್ರೆಸ್ ಮುಖಂಡನ ಕೈವಾಡ...

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ದಿನಕ್ಕೊಂದು ತಿರುವು: ಮತ್ತೆರಡು ವಿಡಿಯೋ ಬಿಡುಗಡೆ: ಕಾಂಗ್ರೆಸ್ ಮುಖಂಡನ ಕೈವಾಡ ಆರೋಪ

ಹುಬ್ಬಳ್ಳಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಂತ್ರಸ್ತ ಯುವತಿ ಹೊಸ ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲ್ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕನ ಕೈವಾಡದ ಬಗ್ಗೆ ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪುರ ವ್ಯಾಪ್ತಿಯಲ್ಲಿ ನಡೆದಿದ್ದ ಎರಡನೇ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ, ಹಳೆಯ ಖಾಸಗಿ ವಿಡಿಯೋಗಳನ್ನು ಬಳಸಿ ಆರೋಪಿ ಮುಪಿಜ್ ಮಿಯಾನವರ ಬೆದರಿಸುತ್ತಿದ್ದು, ಈಗ ಅವುಗಳನ್ನು ವೈರಲ್ ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆರಡು ವಿಡಿಯೋಗಳನ್ನು ಯುವತಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್​​​​ ಮುಖಂಡನ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಸತ್ಯಾಸತ್ಯತೆಯನ್ನು ಅವರು ಬಿಚ್ಚಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿನ್ನೆ ವೈರಲ್ ಆಗಿರುವ ವಿಡಿಯೋಗಳು ಸುಮಾರು ಒಂದು ವರ್ಷದ ಹಿಂದಿನವು. ಆರೋಪಿ ಮುಪಿಜ್ ಮಿಯಾನವರ ನನ್ನ ಖಾಸಗಿ ಕ್ಷಣಗಳ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಆತ ಹೇಳಿದಂತೆ ನಾನು ವಿಡಿಯೋದಲ್ಲಿ ಮಾತನಾಡದಿದ್ದರೆ ಆ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆತನ ಒತ್ತಾಯಕ್ಕೆ ಮಣಿದು ನಾನು ಅಂದು ಆತನ ಪರವಾಗಿ ವಿಡಿಯೋ ಮಾಡಿದ್ದೆ. ಆದರೆ ಈಗ ಅದನ್ನೇ ಬಳಸಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.

ಇನ್ನು ವಿಡಿಯೋ ವೈರಲ್ ಮಾಡಿದ್ದರ ಹಿಂದೆ ಸ್ಥಳೀಯ ಕಾಂಗ್ರೆಸ್ ಮುಖಂಡನ ಕೈವಾಡವಿದೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಅಣ್ಣಾ, ನನಗೆ ಅನ್ಯಾಯವಾದಾಗ ಬಂದು ನನ್ನ ನೋವನ್ನು ಒಮ್ಮೆಯೂ ಕೇಳದ ನೀವು, ಈಗ ಹಳೆ ವಿಡಿಯೋಗಳನ್ನು ವೈರಲ್ ಮಾಡಿಸುತ್ತಿದ್ದೀರಿ. ನಿಮ್ಮ ಮನೆಯವರಿಗೆ ಅಥವಾ ನಿಮ್ಮ ಮಗಳಿಗೆ ಹೀಗಾಗಿದ್ದರೆ ನೀವು ಸುಮ್ಮನಿರುತ್ತಿದ್ದೀರಾ? ಎಂದು ಯುವತಿ ಪ್ರಶ್ನಿಸಿದ್ದಾರೆ.

ಕೇಶ್ವಾಪುರ ಠಾಣೆಯಲ್ಲಿ ಮುಪಿಜ್ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಈ ಹಿಂದೆ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಪ್ರಕರಣದ ಬೆನ್ನಲ್ಲೇ ಈ ಎರಡನೇ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಹುಬ್ಬಳ್ಳಿಯಲ್ಲಿ ಭಾರಿ ಆತಂಕ ಸೃಷ್ಟಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular