ಬೆಂಗಳೂರು: ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಡಾ. ಅನೂಪ್ ಶೆಟ್ಟಿ ಅಮಾನತು ಮಾಡಿದ್ದಾರೆ.
ಎಎಸ್ಐ ಜಿ. ಸುರೇಶ್, ಕಾನ್ ಸ್ಟೆಬಲ್ ಗಳಾದ ಪ್ರಶಾಂತ್ ಮತ್ತು ಎಸ್.ಬಿ. ಸಾಧಿಕ್ ಅಮಾನತುಗೊಂಡವರು. ವಿಶೇಷ ಕಾರ್ಯಚರಣೆ ವೇಳೆಯಲ್ಲಿ ಬಾಡಿ ವೋರ್ನ್ ಕ್ಯಾಮರಾ ಬಂದ್ ಮಾಡಿ ದಂಡ ವಿಧಿಸುವುದು, ಕರ್ತವ್ಯಕ್ಕೆ ಗೈರು ಹಾಜರಿ ಮತ್ತು ಅಧಿಕಾರಿಗಳು ಸೂಚಿಸಿದ ಪಾಯಿಂಟ್ ನಲ್ಲಿ ಇರದೆ ಬೇರೆ ಕಡೆಗೆ ಹೋಗಿ ವಾಹನ ತಡೆದು ಹಣ ವಸೂಲಿ ಮಾಡುತ್ತಿದ್ದ ಆರೋಪ ಸಂಬಂಧ ಅಮಾನತು ಮಾಡಲಾಗಿದೆ.
ಕಾರಣ ಇಲ್ಲದೆ ದಂಡ ಇಧಿಸುವುದು ಸೇರಿ ಮೂವರ ವಿರುದ್ಧ ಇನ್ನೂ ಅನೇಕ ಆರೋಪ ಕೇಳಿ ಬಂದಿದ್ದವು. ತನಿಖೆಯ ವೇಳೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.

