HomeHealthಉತ್ತಮ ʼಆರೋಗ್ಯʼ ಬಯಸುವವರು ಸರಿಯಾದ ಸಮಯದಲ್ಲಿ ಸೇವಿಸಿ ಆಹಾರ

ಉತ್ತಮ ʼಆರೋಗ್ಯʼ ಬಯಸುವವರು ಸರಿಯಾದ ಸಮಯದಲ್ಲಿ ಸೇವಿಸಿ ಆಹಾರ

ಹಸಿಯದಿರೆ ಉಣಬೇಡ ಹಸಿದೂ ಮತ್ತಿರಬೇಡ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಇಂದಿನ ಒತ್ತಡದ ಜೀವನ, ಜಂಜಾಟಗಳಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ.

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಊಟದ ಬಗ್ಗೆ ಹೆಚ್ಚಿನ ನಿಗಾ ವಹಿಸಿದರೆ, ಆರೋಗ್ಯಕ್ಕೂ ಒಳ್ಳೆಯದು.

ತಿಂಡಿ ಮತ್ತು ಊಟದ ನಡುವೆ 4 ಗಂಟೆಗಳ ಅಂತರವಿದ್ದರೆ ಉತ್ತಮ. ಬೆಳಿಗ್ಗೆ ಮನೆಯಿಂದ ಹೊರಡುವಾಗ ಸರಿಯಾದ ಸಮಯಕ್ಕೆ ತಿಂಡಿಯನ್ನು ತಿಂದರೂ, ಊಟವನ್ನು ಮಾತ್ರ ಬಿಡುವಾದಾಗಲೇ ಅನೇಕರು ಮಾಡುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಡಿದ ಕೆಲಸವನ್ನು ಮುಗಿಸುವ ಧಾವಂತದಲ್ಲಿ ಹೆಚ್ಚಿನವರು ಊಟದ ಮೇಲೆ ಗಮನವನ್ನೇ ಹರಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ಮಾಡದೇ ಟೀ ಕುಡಿಯುತ್ತಾರೆ. ಆದರೆ, ಹಸಿದ ಹೊಟ್ಟೆಯಲ್ಲಿ ಹೆಚ್ಚು ಟೀ ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ತಿಳಿದವರು.

ಊಟವನ್ನು ಹಸಿವಾಗದೇ ಮಾಡಬಾರದು, ಹಸಿವಾದ ಬಳಿಕ ಬಹಳ ಹೊತ್ತು ತಡೆದುಕೊಳ್ಳಬಾರದು. ನಿಮ್ಮ ಕೆಲಸದ ಒತ್ತಡದ ನಡುವೆಯೂ ಒಂದಿಷ್ಟು ಬಿಡುವು ಮಾಡಿಕೊಂಡು ಊಟವನ್ನು ಮಾಡಿ.

ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಇಲ್ಲವಾದರೆ ಅಜೀರ್ಣವಾಗುತ್ತದೆ. ಅಜೀರ್ಣದಿಂದ ಅನೇಕ ವ್ಯಾಧಿಗಳು ಬರುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಊಟದ ಬಗ್ಗೆ ನಿಮಗಿರಲಿ ಗಮನ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular