HomeLatest NewsBREAKING : ಈ ಬಾರಿ ಲೇಖಕಿ 'ಬಾನು ಮುಷ್ತಾಕ್' 'ಮೈಸೂರು ದಸರಾ' ಉದ್ಘಾಟಿಸಲಿದ್ದಾರೆ : CM...

BREAKING : ಈ ಬಾರಿ ಲೇಖಕಿ ‘ಬಾನು ಮುಷ್ತಾಕ್’ ‘ಮೈಸೂರು ದಸರಾ’ ಉದ್ಘಾಟಿಸಲಿದ್ದಾರೆ : CM ಸಿದ್ದರಾಮಯ್ಯ ಘೋಷಣೆ.!

ಮೈಸೂರು : ಈ ಬಾರಿ ಲೇಖಕಿ ಬಾನು ಮುಷ್ತಾಕ್ ‘ಮೈಸೂರು ದಸರಾ’ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ದಸರಾ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು .ಮೈಸೂರು ದಸರಾ ಉದ್ಘಾಟಿಸಲು ಮುಷ್ತಾಕ್ ಅವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ, ಅವರೇ ಈ ಬಾರಿ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ. ಕರ್ನಾಟಕದ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿದ್ದು ಬಹಳ ಸಂತೋಷವಾಗಿದೆ ಎಂದರು.

ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ನಮ್ಮ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿಯವರು ಉದ್ಘಾಟಿಸಲಿದ್ದಾರೆ ಎಂಬ ಕಾಲ್ಪನಿಕ ಸುದ್ದಿಯನ್ನು ಕೆಲ ಮಾಧ್ಯಮಗಳು ವರದಿ ಮಾಡಿರುವುದನ್ನು ಗಮನಿಸಿದೆ. ಇದು ಸತ್ಯಕ್ಕೆ ದೂರವಾದುದ್ದು. ಆ ರೀತಿಯ ಯೋಚನೆಯಾಗಲೀ, ಪ್ರಸ್ತಾವನೆಯಾಗಲಿ ಸರ್ಕಾರದ ಮುಂದೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾನು ಮುಷ್ತಾಕ್ ಯಾರು..?

ಬಾನು ಮುಷ್ತಾಕ್ (ಜನನ ಏಪ್ರಿಲ್ 3, 1948) ಕರ್ನಾಟಕದ ಒಬ್ಬ ಭಾರತೀಯ ಕನ್ನಡ ಭಾಷೆಯ ಬರಹಗಾರ್ತಿ, ಕಾರ್ಯಕರ್ತೆ ಮತ್ತು ವಕೀಲೆ . ದೀಪಾ ಭಸ್ತಿ ಅನುವಾದಿಸಿದ ಅವರ ಸಣ್ಣ ಕಥೆಗಳ ಆಯ್ದ ಭಾಗವಾದ ಹಾರ್ಟ್ ಲ್ಯಾಂಪ್ಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ , ಈ ಪುಸ್ತಕವು 2025 ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿದೆ.

ಬಾನು ಮುಷ್ತಾಕ್ ಕರ್ನಾಟಕದ ಹಾಸನದಲ್ಲಿ ಏಪ್ರಿಲ್ 3, 1948 ರಂದು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು ಅವರು ಲಂಕೇಶ್ ಪತ್ರಿಕೆ ಪತ್ರಿಕೆಯ ವರದಿಗಾರರಾಗಿದ್ದರು ಮತ್ತು ಕೆಲವು ತಿಂಗಳುಗಳ ಕಾಲ ಬೆಂಗಳೂರಿನಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಮಾಡಿದರು .

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular