ವೇಗವಾಗಿ ʼತೂಕʼ ಇಳಿಸಲು ಸಹಕಾರಿ ಈ ಮಸಾಲೆ ಪದಾರ್ಥ

ಬೊಜ್ಜು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಸೂಕ್ತ ಸಮಯದಲ್ಲಿ ನೀವು ತೂಕವನ್ನು ನಿಯಂತ್ರಿಸದೇ ಇದ್ದರೆ ಸಮಸ್ಯೆಗಳು ಹೆಚ್ಚಾಗುತ್ತವೆ. ತೂಕ ಇಳಿಸೋದು ಬಹುದೊಡ್ಡ ಸವಾಲು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಇದಕ್ಕಾಗಿ ಕೆಲವರು ಜಿಮ್‌ನಲ್ಲಿ ಬೆವರು ಹರಿಸಿದರೆ, ಕೆಲವರು ನೇರವಾಗಿ ವೈದ್ಯರ ಬಳಿಗೆ ಹೋಗ್ತಾರೆ.

ಇದರ ಹೊರತಾಗಿಯೂ ನೀವು ತೂಕ ಇಳಿಸಿಕೊಳ್ಳಲು ಆಯುರ್ವೇದ ಮದ್ದನ್ನು ಫಾಲೋ ಮಾಡಬಹುದು. ಇವೆಲ್ಲವೂ ನಿಮ್ಮ ಅಡುಗೆ ಮನೆಯಲ್ಲೇ ಲಭ್ಯವಿವೆ ಅನ್ನೋದು ಮತ್ತೊಂದು ವಿಶೇಷ.

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಓಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದರಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿವೆ. ಓಮದಲ್ಲಿರುವ ವಿರೇಚಕ ಗುಣಗಳಿಂದಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ದೇಹದಲ್ಲಿ ಜೀರ್ಣಶಕ್ತಿ ಬಲಗೊಂಡಾಗ ತೂಕವನ್ನು ನಿಯಂತ್ರಿಸುವುದು ಸುಲಭ.

ಓಮವನ್ನು ನೀವು ನಾಲ್ಕು ರೀತಿಯಲ್ಲಿ ಸೇವನೆ ಮಾಡಬಹುದು. ಸ್ವಲ್ಪ ಮೆಂತ್ಯ, ಬ್ಲಾಕ್‌ ಸೀಡ್‌ ಮತ್ತು ಸೋಂಪನ್ನು ಹುರಿದುಕೊಳ್ಳಿ. ಅದನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿಗೆ 1 ಚಮಚ ಈ ಪುಡಿಯನ್ನು ಹಾಕಿಕೊಂಡು ಕುಡಿಯಿರಿ. ಈ ರೀತಿ ಮಾಡುವುದರಿಂದ ದೇಹದ ಕೊಬ್ಬು ಕರಗುತ್ತದೆ.

ಸ್ವಲ್ಪ ಓಮವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿಕೊಂಡು ಕುಡಿಯಿರಿ. ಈ ರೀತಿ ಪ್ರತಿದಿನ ಓಮದ ಕಷಾಯ ಕುಡಿದರೆ ತೂಕ ಇಳಿಸಬಹುದು. ದೇಹದ ಕೊಬ್ಬನ್ನು ಕಡಿಮೆ ಮಾಡಲು  ಜೇನುತುಪ್ಪ ಮತ್ತು ಓಮದ ಕಾಂಬಿನೇಷನ್‌ ಒಳ್ಳೆಯದು. 25 ಗ್ರಾಂನಷ್ಟು ಓಮವನ್ನು 250 ಮಿಲಿ ನೀರಿನಲ್ಲಿ ಇಡೀ ರಾತ್ರಿ ನೆನೆಸಿಡಿ. ಮರುದಿನ ಬೆಳಗ್ಗೆ ಅದನ್ನು ಸೋಸಿಕೊಂಡು 1 ಚಮಚ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಸತತ ಮೂರು ತಿಂಗಳ ಕಾಲ ಇದನ್ನು ಮಾಡಿದರೆ ನೀವು ತೂಕವನ್ನು ಇಳಿಸಬಹುದು.

ಓಮ ಮತ್ತು ಸೋಂಪನ್ನು ಜೊತೆಯಾಗಿ ಸೇವನೆ ಮಾಡುವುದರಿಂದ ದೇಹದ ಕೊಬ್ಬನ್ನು ಕರಗಿಸಬಹುದು. ಒಂದು ಚಮಚ ಓಮ ಹಾಗೂ ಒಂದು ಚಮಚ ಸೋಂಪನ್ನು 4 ಕಪ್‌ ನೀರಿಗೆ ಹಾಕಿ ಕುದಿಸಿ. ನಂತರ ಸೋಸಿಕೊಂಡು ಕುಡಿಯಿರಿ. ಈ ರೀತಿ ನಿಯಮಿತವಾಗಿ ಮಾಡುತ್ತ ಬಂದರೆ ತೂಕ ನಿಯಂತ್ರಣಕ್ಕೆ ಬರುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read