HomeLatest Newsವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ಮದ್ದು

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ಮದ್ದು

ವಯಸ್ಸಾಗಿರೋದು ಮುಖದಲ್ಲಿ ಗೊತ್ತಾಗಿಬಿಡುತ್ತೆ. ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಇದೊಂದೆ ಅಲ್ದೆ ಇನ್ನೂ ಅನೇಕ ಸಮಸ್ಯೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಣ್ಣಪುಟ್ಟ ಮನೆ ಮದ್ದಿನಿಂದಲೇ ಮುಖದ ಮೇಲೆ ಕಾಣುವ ವಯಸ್ಸಿನ ಗೆರೆಯನ್ನು ತಡೆಯಬಹುದಾಗಿದೆ.

ನಿಂಬೆ ರಸಕ್ಕೆ ಗುಲಾಬಿ ರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಚರ್ಮ ಸುಕ್ಕುಗಟ್ಟುವುದಿಲ್ಲ.

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.

ಪಪ್ಪಾಯಿ ಹಣ್ಣಿಗೆ ಜೇನುತುಪ್ಪ ಸೇರಿಸಿ ಮಿಕ್ಸಿ ಮಾಡಿಕೊಂಡು ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಟ್ಟೆಯ ಬಿಳಿ ಭಾಗಕ್ಕೆ ನಿಂಬೆ ರಸ ಮತ್ತು ಹಾಲಿನ ಕೆನೆಯನ್ನು ಸೇರಿಸಿ ಈ ಮಿಶ್ರಣವನ್ನು ಬಳಸಿ.

ಆಲೂಗಡ್ಡೆ ಹಾಗೂ ಕ್ಯಾರೆಟ್ ರುಬ್ಬಿಕೊಳ್ಳಿ. ಇದನ್ನು ಪ್ಯಾಕ್ ತರ ಮುಖಕ್ಕೆ ಹಚ್ಚಿಕೊಳ್ಳಿ.

ಮೊಸರಿಗೆ ನಿಂಬೆ ರಸ ಬೆರೆಸಿ. ಅದಕ್ಕೆ ಚಿಟಕಿ ಅರಿಶಿನ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಚರ್ಮ ಹೊಳಪು ಪಡೆಯುತ್ತದೆ.

ಹಾಲಿಗೆ ಬಾದಾಮಿ ಪುಡಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಸುಕ್ಕು ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular