HomeInternational2 ಮಡದಿಯರು 9 ಮಕ್ಕಳನ್ನು ಕೂಲಾಗಿ ಮೇಂಟೇನ್ ಮಾಡ್ತಾನೆ ಬ್ಯಾಂಕಾಕ್‌ ನ ಈ ಭೂಪ...!

2 ಮಡದಿಯರು 9 ಮಕ್ಕಳನ್ನು ಕೂಲಾಗಿ ಮೇಂಟೇನ್ ಮಾಡ್ತಾನೆ ಬ್ಯಾಂಕಾಕ್‌ ನ ಈ ಭೂಪ…!

ಒಬ್ಬ ಮಡದಿ ಹಾಗೂ ಒಂದು ಮಗುವನ್ನು ಸಾಕುವುದೇ ದುಸ್ತರವಾಗಿರುವ ಈ ಕಾಲದಲ್ಲಿ ಥಾಯ್ಲೆಂಡ್‌ನ ವ್ಯಕ್ತಿಯೊಬ್ಬ ಇಬ್ಬರು ಮಡದಿಯರನ್ನು ಮೇಂಟೇನ್ ಮಾಡುವ ಮೂಲಕ ಭಾರೀ ಸುದ್ದಿ ಮಾಡುತ್ತಿದ್ದಾನೆ.

ಏಕಕಾಲದಲ್ಲಿ ಹೀಗೆ ಇಬ್ಬರು ಹೆಂಡಿರನ್ನು ನಿರ್ವಹಿಸುವುದು ಈತನಿಗೆ ಯಾವುದೇ ಸಮಸ್ಯೆ ಎಂಬಂತೆ ಕಾಣುತ್ತಿಲ್ಲ. ಅಲ್ಲದೇ ಈತನಿಗೆ ಇಬ್ಬರು ಹೆಂಡತಿಯರಿಂದ ಒಂಬತ್ತು ಮಕ್ಕಳೂ ಆಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾನೋಪ್ ನುಟ್ಟಯೋಥಿನ್ ಹೆಸರಿನ 46 ವರ್ಷದ ಈ ವ್ಯಕ್ತಿಗೆ 36 ವರ್ಷದ ವಾರಿಸ್ಸಾರಾ ಪೊಕ್ಸ್ರಿಚಾನ್ ಹಾಗೂ 30 ವರ್ಷದ ನಟ್ಟಯಾ ಟೊಂಗ್ಪಾನ್ ಹೆಸರಿನ ಇಬ್ಬರು ಮಡದಿಯರಿದ್ದಾರೆ. 2018ರ ವ್ಯಾಲೆಂಟೈನ್ಸ್‌ ದಿನದಂದು ತನ್ನಿಬ್ಬರೂ ಮಡದಿಯರೊಂದಿಗೆ ಸಂತಸದಿಂದ ಫೋಟೋ ತೆಗೆದುಕೊಂಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ದಿನದಿಂದ ಈತ ಹೀಗೆ ವೈರಲ್ ಆಗಿದ್ದಾನೆ.

ತನಗೆ ಮೊದಲು ಮೂವರು ಮಡದಿಯರಿದ್ದರು ಎನ್ನುವ ಮಾನೋಪ್, ಇದೀಗ ತನ್ನ ಮೊದಲ ಮಡದಿ ಮೃತಪಟ್ಟಿದ್ದು, ಆಕೆಯೊಂದಿಗೆ ತನಗೆ ಮೂವರು ಮಕ್ಕಳಿದ್ದಾರೆ ಎನ್ನುತ್ತಾನೆ. ದಶಕದ ಮಟ್ಟಿಗೆ ತನ್ನ ಎರಡನೇ ಪತ್ನಿ ವಾರಿಸ್ಸಾರಾ ಜೊತೆಗೆ ಸಂಸಾರ ಮಾಡುತ್ತಿದ್ದಿದ್ದಾಗಿ ತಿಳಿಸಿದ ಮಾನೋಪ್, ಕೆಲ ದಿನಗಳ ಬಳಿಕ ನಟ್ಟಾಯಾಳನ್ನೂ ಜೊತೆಗೆ ಕರೆತರುವ ನಿರ್ಧಾರ ಮಾಡಿದನಂತೆ! ಪ್ರತಿ ಮಡದಿಯಿಂದಲೂ ತಲಾ ಮೂರರಂತೆ ಮಕ್ಕಳನ್ನು ಪಡೆದಿರುವ ಈತ ಈ ಒಟ್ಟು ಒಂಬತ್ತು ಮಕ್ಕಳ ತಂದೆಯಾಗಿದ್ದಾನೆ.

ಕಾರಿನ ಬಿಡಿಭಾಗಗಳ ಮಾರಾಟದ ವೃತ್ತಿಯಲ್ಲಿರುವ ಮಾನೋಪ್‌ಗೆ ಆತನ ಕೆಲಸದಲ್ಲಿ ಇಬ್ಬರೂ ಮಡದಿಯರು ಸಹಾಯ ಮಾಡುತ್ತಾರೆ. ತಮ್ಮ ಪತಿ ತಮ್ಮಿಬ್ಬರನ್ನೂ ನ್ಯಾಯಸಮ್ಮತ್ತವಾಗಿ ನೋಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ ಇಬ್ಬರೂ ಮಡದಿಯರು.

For Latest News Updates, Join Our Whatsapp Community🚩
RELATED ARTICLES

Most Popular