HomeInternationalಕಳ್ಳತನ ಮಾಡುವ ಮುನ್ನ ಪಬ್ ನಲ್ಲಿ ಆಹಾರ ಸೇವಿಸಿ ರಿಲ್ಯಾಕ್ಸ್ ಆದ ಕಳ್ಳ; ವಿಡಿಯೋ ವೈರಲ್

ಕಳ್ಳತನ ಮಾಡುವ ಮುನ್ನ ಪಬ್ ನಲ್ಲಿ ಆಹಾರ ಸೇವಿಸಿ ರಿಲ್ಯಾಕ್ಸ್ ಆದ ಕಳ್ಳ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣ ಒಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳತನ ಮಾಡುವ ಮುನ್ನ ಚೋರ, ಆರಾಮವಾಗಿ ಆಹಾರ ಸೇವಿಸಿ ಬಳಿಕ ತನ್ನ ಕೃತ್ಯ ಎಸಗಿದ್ದಾನೆ.

ಕಳ್ಳತನ ಮಾಡುವ ಸಲುವಾಗಿ ಈ ಪಬ್ ಗೆ ಬೆಳಗಿನ ಜಾವ 2.13ರ ಸುಮಾರಿಗೆ ಬಂದಿರುವ ಈತ ಸುಸ್ತಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಬಹುಶಃ ಆಹಾರ ಸೇವಿಸಿದ್ದಾನೆ ಎಂದು ಕಾಣುತ್ತದೆ.

ಬಳಿಕ ಕಳ್ಳತನ ಕೃತ್ಯವೆಸಗಿದ್ದು ಪಬ್ ಆಡಳಿತ ಮಂಡಳಿ ಈ ವಿಡಿಯೋ ಹಂಚಿಕೊಂಡ ಬಳಿಕ ಇಲ್ಲಿಗೆ ಪ್ರತಿನಿತ್ಯ ಬರುವವರು ಈತ ಪರಿಚಿತನಂತೆ ಕಾಣುತ್ತಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular