HomeHealthಅಸಿಡಿಟಿ ಸಮಸ್ಯೆಗೆ ನಮ್ಮ ಅಡುಗೆ ಮನೆಯಲ್ಲೇ ಇದೆ ಸುಲಭದ ಪರಿಹಾರ…!

ಅಸಿಡಿಟಿ ಸಮಸ್ಯೆಗೆ ನಮ್ಮ ಅಡುಗೆ ಮನೆಯಲ್ಲೇ ಇದೆ ಸುಲಭದ ಪರಿಹಾರ…!

 

ಕೊತ್ತಂಬರಿ ಸೊಪ್ಪಿನ ಆರೋಗ್ಯಕಾರಿ ಅಂಶಗಳ ಬಗ್ಗೆ ನಾವು ಈಗಾಗ್ಲೇ ತಿಳಿದುಕೊಂಡಿದ್ದೇವೆ. ಅದೇ ರೀತಿ ಕೊತ್ತಂಬರಿ ಬೀಜ ಕೂಡ ಯಾವುದೇ ಔಷಧಕ್ಕಿಂತ ಕಡಿಮೆಯೇನಿಲ್ಲ. ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣವಿದ್ದಂತೆ. ಕೊತ್ತಂಬರಿ ಕಷಾಯವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ತೊಂದರೆಗಳು ನಿವಾರಣೆಯಾಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜದ ಕಷಾಯವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಾಸ್ತವವಾಗಿ ಕೊತ್ತಂಬರಿ ಅಥವಾ ಧನಿಯಾ ಒಂದು ಸೂಪರ್‌ಫುಡ್, ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಕೊತ್ತಂಬರಿ ಸೊಪ್ಪು ಮತ್ತು ಬೀಜಗಳೆರಡೂ ಎಲ್ಲರಿಗೂ ಪ್ರಯೋಜನಕಾರಿ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಬೀಜದ ಕಷಾಯ ಕುಡಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಜೊತೆಗೆ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.

ಅಸಿಡಿಟಿ – ಅಸಿಡಿಟಿ ಸಮಸ್ಯೆ ಇರುವವರು ಕೊತ್ತಂಬರಿ ಬೀಜದ ನೀರು ಅಥವಾ ಕಷಾಯವನ್ನು ಕುಡಿಯಬೇಕು. ಕೊತ್ತಂಬರಿ ಬೀಜಗಳಲ್ಲಿರುವ ಗುಣಲಕ್ಷಣಗಳು ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಹಾಗಾಗಿ ಅದು ಅಸಿಡಿಟಿಯನ್ನು ನಿವಾರಿಸಬಲ್ಲದು.

ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲದ ಮಟ್ಟವನ್ನು ಕಡಿಮೆ ಮಾಡಬಹುದು. ಸುಡುವ ಸಂವೇದನೆ ಅಥವಾ ನೋವು ಕೂಡ ಕಡಿಮೆಯಾಗುತ್ತದೆ. ಕೊತ್ತಂಬರಿ ಬೀಜಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಆದ್ದರಿಂದ ಇದು ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ತೂಕ ಇಳಿಕೆ – ಕೊತ್ತಂಬರಿ ಬೀಜದ ಕಷಾಯ ತೂಕವನ್ನು ಕೂಡ ಕಡಿಮೆ ಮಾಡಬಲ್ಲದು. ತೂಕ ನಷ್ಟಕ್ಕೆ ಇದು ಸುಲಭದ ಮಾರ್ಗ. ಕೊತ್ತಂಬರಿ ಬೀಜಗಳು ಮತ್ತು ಎಲೆಗಳಲ್ಲಿ ಫೈಬರ್‌ ಸಮೃದ್ಧವಾಗಿದೆ. ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಕೊತ್ತಂಬರಿ ಬೀಜಗಳು ಕೊಬ್ಬನ್ನು ಸುಡುವಲ್ಲಿ ಕೂಡ ಸಹಕಾರಿ.

ಚರ್ಮಕ್ಕೆ ಪ್ರಯೋಜನಕಾರಿ – ಕೊತ್ತಂಬರಿ ನೀರು ಚರ್ಮಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರನ್ನು ಕುಡಿಯಿರಿ. ಇದು ಮುಖದಲ್ಲಿರುವ ಮೊಡವೆ ಮತ್ತು ಕಲೆಗಳನ್ನು ಸಹ ತೆಗೆದುಹಾಕುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular