HomeHealthಈ ಕೆಲ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಇದೆ 'ಮದ್ದು'

ಈ ಕೆಲ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಇದೆ ‘ಮದ್ದು’

‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿದೆ. ಆದರೆ ನಮ್ಮ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಉಪಯೋಗಿಸುವಂತಹ ಹಲವು ಸಾಮಗ್ರಿಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಈ ಕೆಳಗಿನಂತಿವೆ.

ಪ್ರತಿ ದಿನ 2 ಬಾರಿ ಖರ್ಜೂರದ ಜೊತೆ 4- 6 ಗೋಡಂಬಿಯನ್ನು ತಿಂದ ಮೇಲೆ ಹಾಲು ಕುಡಿಯಬೇಕು. ಈ ರೀತಿ 30 ದಿನ ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗಿ ದೈಹಿಕ ಶಕ್ತಿ ಬಲಗೊಳ್ಳುತ್ತದೆ.

ಸಣ್ಣ ಪುಟ್ಟ ಗಾಯಗಳನ್ನು ನಿವಾರಿಸಲು ಜೇನು ತುಪ್ಪ, ಬೇವು ಬಳಸಿ. ಬೇವಿನ ಸೊಪ್ಪು ರುಬ್ಬಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಗೆ ಜೇನು ತುಪ್ಪ ಬೆರೆಸಿ ಗಾಯಕ್ಕೆ ಹಚ್ಚಿದರೆ ಗಾಯ ಶೀಘ್ರದಲ್ಲಿ ಗುಣವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಲೆಯಲ್ಲಿ ತುರಿಕೆ ಕಂಡು ಬಂದಾಗ ಬೇವಿನ ಎಲೆಗಳನ್ನು ಅರೆದು ಹಚ್ಚಿಕೊಂಡು ಅರ್ಧ ಗಂಟೆಯ ನಂತರ ತಲೆಯನ್ನು ತೊಳೆದುಕೊಂಡರೆ ಸಮಸ್ಯೆ ನಿವಾರಣೆಯಾಗುತ್ತದೆ.

ಅತ್ತಿಯ ಎಲೆಗಳನ್ನು ತಂದು ನೀರಿನಲ್ಲಿ ಸ್ವಚ್ಛಮಾಡಿ ಒಂದು ಸಲಕ್ಕೆ 6-8 ಎಲೆಗಳಂತೆ ನಿತ್ಯ 2-3 ಸಲ ತಿಂದರೆ ಹೊಟ್ಟೆಯಲ್ಲಿನ ಹುಣ್ಣು ವಾಸಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular