HomeKarnatakaಅಕ್ರಮ –ಸಕ್ರಮ: ರಾಜ್ಯಾದ್ಯಂತ ಸೈಟ್ ಗಳಿಗೆ ಎ ಖಾತಾ, ಬಿ ಖಾತಾ: ಅನಧಿಕೃತ ನಿವೇಶನಗಳಿಗೆ ಶಾಶ್ವತ...

ಅಕ್ರಮ –ಸಕ್ರಮ: ರಾಜ್ಯಾದ್ಯಂತ ಸೈಟ್ ಗಳಿಗೆ ಎ ಖಾತಾ, ಬಿ ಖಾತಾ: ಅನಧಿಕೃತ ನಿವೇಶನಗಳಿಗೆ ಶಾಶ್ವತ ಕಡಿವಾಣ

ಬಾಗಲಕೋಟೆ: ಬೆಂಗಳೂರು ಮಾದರಿಯಲ್ಲಿ ರಾಜ್ಯಾದ್ಯಂತ ನಿವೇಶನಗಳಿಗೆ ಎ ಖಾತಾ, ಬಿ ಖಾತಾ ಆರಂಭಿಸಲಾಗುವುದು. ಇದರಿಂದ ಅನಧಿಕೃತ ನಿವೇಶನಗಳಿಗೆ ಶಾಶ್ವತ ಕಡಿವಾಣ ಬೀಳುತ್ತದೆ ಎಂದು ಪೌರಾಡಳಿತ ರಹೀಂ ಖಾನ್ ತಿಳಿಸಿದ್ದಾರೆ.

ನಗರ, ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂ ಪರಿವರ್ತನೆಗಾಗಿ ಮನೆ, ನಿವೇಶನ ಸೇರಿ ಬಡಾವಣೆ ನಿರ್ಮಿಸಿದ್ದರೂ, ಸುಪ್ರೀಂಕೋರ್ಟ್ ಆದೇಶದ ಪರಿಣಾಮ ಕೆಲವು ಕಾರಣಗಳಿಂದ ಅವುಗಳಿಗೆ ಅಧಿಕೃತ ಸಕ್ರಮ ದೊರೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅದಿವೇಶನದಲ್ಲಿ ಮಸೂದೆ ಮಂಡಿಸಲಾಗಿದೆ. ಅಲ್ಲಿಯೂ ಅಕ್ರಮ ಸಕ್ರಮ ಕಾಯ್ದೆ ಪಾಸ್ ಆಗಿದೆ. ಈ ಬಗ್ಗೆ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು. ಕೋರ್ಟ್ ಆದೇಶದ ಪರಿಣಾಮ 2017ರಿಂದ ರಾಜ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಬೆಂಗಳೂರು ಮಾದರಿಯಲ್ಲಿ ರಾಜ್ಯದಾದ್ಯಂತ ನಿವೇಶನಗಳಿಗೆ ಎ ಖಾತಾ, ಬಿ ಖಾತಾ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular