HomeEntertainment'ಅಂದೊಂದಿತ್ತು ಕಾಲ' ಚಿತ್ರದ ಸಾಂಗ್ ಟೀಸರ್ ರಿಲೀಸ್

‘ಅಂದೊಂದಿತ್ತು ಕಾಲ’ ಚಿತ್ರದ ಸಾಂಗ್ ಟೀಸರ್ ರಿಲೀಸ್

ವಿನಯ್ ರಾಜಕುಮಾರ್ ನಟನೆಯ ಕೀರ್ತಿ ಕುಚೇಲ ನಿರ್ದೇಶನದ ‘ಅಂದೊಂದಿತ್ತು ಕಾಲ’ ಚಿತ್ರದ ಹಾಡಿನ ಸಣ್ಣ ತುಣುಕೊಂದನ್ನು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಪೂರ್ತಿ ಹಾಡನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ್ ಅಭಿನಯಿಸಿದ್ದು, ನಿಶಾ ರವಿ ಕೃಷ್ಣನ್, ಜಗಪ್ಪ, ಗೋವಿಂದೇಗೌಡ ಬಣ್ಣ ಹಚ್ಚಿದ್ದಾರೆ. ಭುವನ್ ಸುರೇಶ್ ತಮ್ಮ ಭುವನ್ ಮೂವೀಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣವಿದ್ದು, ರಾಘವೇಂದ್ರ ವಿ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular