HomeEntertainmentಮೊದಲನೇ ಹಂತದ ಶೂಟಿಂಗ್ ಪೂರ್ಣಗೊಳಿಸಿದ 'ಉಡಾಳ' ಚಿತ್ರತಂಡ

ಮೊದಲನೇ ಹಂತದ ಶೂಟಿಂಗ್ ಪೂರ್ಣಗೊಳಿಸಿದ ‘ಉಡಾಳ’ ಚಿತ್ರತಂಡ

ಅಮೋಲ್ ಪಾಟೀಲ್ ನಿರ್ದೇಶನದ ‘ಉಡಾಳ’ ಸಿನಿಮಾ ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಭರ್ಜರಿ ಸೌಂಡು ಮಾಡಿದ್ದು, ಕಳೆದ ತಿಂಗಳು ಬಿಡುಗಡೆಯಾಗಿದ್ದ, ಟೈಟಲ್ ಟೀಸರ್ ನಲ್ಲಿದ್ದ ಪಕ್ಯ ಬಿಜಾಪುರ್ ಪಕ್ಕಾ ಜವಾರಿ ಎಂಬ ಡೈಲಾಗ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸುವಂತೆ ಮಾಡಿತ್ತು.

‘ಉಡಾಳ’ ಚಿತ್ರತಂಡ ಇದೀಗ ಮೊದಲನೇ ಹಂತದ ಶೂಟಿಂಗ್ ಪೂರ್ಣಗೊಳಿಸಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಪೃಥ್ವಿ ಶಾಮನೂರ್ ಮತ್ತು ರಿತಿಕಾ ಶ್ರೀನಿವಾಸ್ ಪ್ರಮುಖ ಪಾತ್ರದಲ್ಲಿದ್ದು, ರವಿ ಶಾಮನೂರ್ ಮತ್ತು ಯೋಗರಾಜ್ ಭಟ್ ನಿರ್ಮಾಣ ಮಾಡಿದ್ದಾರೆ. ಚೇತನ್ ಮತ್ತು ದಾವಿ ಸಂಗೀತ ಸಂಯೋಜನೆ ನೀಡಿದ್ದು, ಮಧು ತುಂಬಾ ಕೆರೆ ಸಂಕಲನ, ಮತ್ತು ಶಿವಶಂಕರ್  ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular