HomeEntertainmentಜನವರಿ 28ಕ್ಕೆ ಬಿಡುಗಡೆಯಾಗಲಿದೆ 'ವೈರಂ' ಚಿತ್ರದ ''ಹರೇ ರಾಮ್'' ಹಾಡು

ಜನವರಿ 28ಕ್ಕೆ ಬಿಡುಗಡೆಯಾಗಲಿದೆ ‘ವೈರಂ’ ಚಿತ್ರದ ”ಹರೇ ರಾಮ್” ಹಾಡು

ದೇವರಾಜ್ ಪುತ್ರ ಪ್ರಣಮ್ ದೇವರಾಜ್ ಅಭಿನಯಿಸಿರುವ ‘ವೈರಂ’ ಚಿತ್ರದ ”ಹರೇ ರಾಮ್” ವಿಡಿಯೋ ಹಾಡು ಇದೇ ಜನವರಿ 28ಕ್ಕೆ a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಅನುರಾಗ್ ಕುಲಕರ್ಣಿ ಈ ಹಾಡಿಗೆ  ಧ್ವನಿಯಾಗಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಸಾಯಿ ಶಿವಾನ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಣಂ ದೇವರಾಜ್ ಗೆ ಜೋಡಿಯಾಗಿ ಮೋನಾಲ್ ಅಭಿನಯಿಸಿದ್ದು, ಗುರುದರಂ, ಚಮಕ್ ಚಂದ್ರ, ಶಂಕರ್ ಅಶ್ವಥ್, ಮತ್ತು ವೀಣಾ ಸುಂದರ್ ತೆರೆ ಹಂಚಿಕೊಂಡಿದ್ದಾರೆ. ಮಹತಿ ಸ್ವರ ಸಾಗರ್ ಸಂಗೀತ ಸಂಯೋಜನೆ ನೀಡಿದ್ದು, ವಿಜಯಕುಮಾರ್ ಅವರ ಸಂಕಲನ ಸಮಲ ಭಾಸ್ಕರ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular