HomeEntertainment'ಮಿಸ್ಟರ್ ರಾಣಿ' ಚಿತ್ರದ ಪ್ರಮೋಷನಲ್ ವಿಡಿಯೋ ಹಾಡು ರಿಲೀಸ್

‘ಮಿಸ್ಟರ್ ರಾಣಿ’ ಚಿತ್ರದ ಪ್ರಮೋಷನಲ್ ವಿಡಿಯೋ ಹಾಡು ರಿಲೀಸ್

ಮಧುಚಂದ್ರ ಆರ್ ನಿರ್ದೇಶನದ ದೀಪಕ್ ಸುಬ್ರಮಣ್ಯ ಅಭಿನಯದ ‘ಮಿಸ್ಟರ್ ರಾಣಿ’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇದರ ಪ್ರಮೋಷನ್ ವಿಡಿಯೋ ಹಾಡೊಂದು youtube ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ. ‘ಆಗುತ್ತೆ ಮಚ್ಚಾ’ ಎಂಬ ಈ  ಹಾಡಿಗೆ ಚೇತನ್ ನಾಯಕ್ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ ಇನ್ನುಳಿದಂತೆ ಅವರ ಸಾಹಿತ್ಯವಿದೆ.

ಎಕ್ಸ್ ಎಲ್ ಆರ್ಬಿಟ್ ಕ್ರಿಯೇಶನ್ಸ್  ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ದೀಪಕ್ ಸುಬ್ರಮಣ್ಯ ಸೇರಿದಂತೆ ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪ ಪ್ರಭಾಕರ್, ಆನಂದ್ ನೀನಾಸಂ, ಲಕ್ಷ್ಮಿ ಕಾರಂತ್  ಬಣ್ಣ ಹಚ್ಚಿದ್ದಾರೆ. ಮಧು ತುಂಬಾ ಕೆರೆ ಸಂಕಲನ, ರವೀಂದ್ರನಾಥ್ ಟಿ ಛಾಯಾಗ್ರಹಣ  ಧನಂಜಯ,   ಹಾಗೂ ಶೇಷ್ ರಾವ್ ಅವರ  ನೃತ್ಯ ನಿರ್ದೇಶನವಿದೆ. ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನವಿದೆ

For Latest News Updates, Join Our Whatsapp Community🚩
RELATED ARTICLES

Most Popular