HomeEntertainmentಡಿಸೆಂಬರ್ 1 ರಂದು ಬರಲಿದೆ 'ಪುಷ್ಪ2' ಚಿತ್ರದ ಮತ್ತೊಂದು ಗೀತೆ

ಡಿಸೆಂಬರ್ 1 ರಂದು ಬರಲಿದೆ ‘ಪುಷ್ಪ2’ ಚಿತ್ರದ ಮತ್ತೊಂದು ಗೀತೆ

‘ಪುಷ್ಪ2’ ಚಿತ್ರದ ‘ಕಿಸ್ಸಿಕ್’ ಎಂಬ  ಲಿರಿಕಲ್ ಹಾಡು ಇತ್ತೀಚಿಗಷ್ಟೇ youtubeನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದೀಗ ಮತ್ತೊಂದು ಹಾಡು ಬಿಡುಗಡೆಗೆ ಸಿದ್ಧವಾಗಿದೆ.’ ಪೀಲಿಂಗ್ಸ್’ ಎಂಬ ಈ ಹಾಡಿಗೆ ಶಂಕರ್ ಬಾಬು ಕಂದುಕೂರಿ, ಲಕ್ಷ್ಮೀ ದಾಸ ಧ್ವನಿಯಾಗಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ. ಚಂದ್ರಬೋಸ್ ಅವರ ಸಾಹಿತ್ಯವಿದೆ.

ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿದ್ದು, ಫಹದ್ ಫಾಸಿಲ್, ಜಗಪತಿ ಬಾಬು, ಧನಂಜಯ ಬಾಬು ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್ ಉಳಿದ ತಾರಾಂಗಣದಲ್ಲಿದ್ದಾರೆ. ನವೀನ್ ನೂಲಿ ಸಂಕಲನವಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ನಿರ್ಮಾಣ ಮಾಡಿದ್ದಾರೆ. ಮುಂದಿನ ತಿಂಗಳು ಡಿಸೆಂಬರ್ 5 ರಂದು ತೆಲುಗು ಸೇರಿದಂತೆ ಸುಮಾರು ಐದು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.

For Latest News Updates, Join Our Whatsapp Community🚩
RELATED ARTICLES

Most Popular