HomeLive Newsಆಗಸ್ಟ್ 15 ರಿಂದ ಶುರುವಾಗಲಿದೆ ಮಹಾರಾಜ ಟ್ರೋಫಿ

ಆಗಸ್ಟ್ 15 ರಿಂದ ಶುರುವಾಗಲಿದೆ ಮಹಾರಾಜ ಟ್ರೋಫಿ

ಶ್ರೀ ರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಮುಂದಿನ ತಿಂಗಳು ಆಗಸ್ಟ್ 15 ರಿಂದ ಆರಂಭವಾಗಲಿದ್ದು, ನಿನ್ನೆಯಷ್ಟೇ ಆಟಗಾರರ ಹರಾಜಿನ ಪ್ರಕ್ರಿಯೆ ನಡೆದಿದೆ. ಬೆಂಗಳೂರು ಬ್ಲಾಸ್ಟರ್ಸ್ ಪ್ರಾಂಚೈಸಿ ಎಲ್ ಆರ್  ಚೇತನ್ ಅವರನ್ನು 8.6 ಲಕ್ಷ ರೂಪಾಯಿಗಳ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ. ಕೃಷ್ಣಪ್ಪ ಗೌತಮ್, ಶ್ರೇಯಸ್‌ ಗೋಪಾಲ್‌ ಕೆ.ಸಿ. ಕಾರ್ಯಪ್ಪ ಸುಚಿತ್ ಸೇರಿದಂತೆ ಹಲವಾರು ಕ್ರಿಕೆಟಿಗರು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದಾರೆ.

ತಮಿಳುನಾಡು ಪ್ರೀಮಿಯರ್ ಲೀಗ್ ಈಗಾಗಲೇ ಐಪಿಎಲ್ ರೀತಿಯಲ್ಲೇ  ಭರ್ಜರಿ ಸೌಂಡ್ ಮಾಡುತ್ತಿದ್ದು, ಆಂಧ್ರ ಪ್ರೀಮಿಯರ್ ಕೂಡ ಎಲ್ಲರ ಮನೆ  ಮಾತಾಗಿದೆ. ಇದೀಗ ಮಹಾರಾಜ ಟ್ರೋಫಿಯ ಮೂರನೇ ಸೀಸನ್ ವೀಕ್ಷಿಸಲು ಕನ್ನಡಿಗರು ಕಾತುರದಿಂದ ಕಾಯುತ್ತಿದ್ದಾರೆ  ಆಗಸ್ಟ್ 15 ರಿಂದ ಸೆಪ್ಟಂಬರ್ 1 ರವರೆಗೆ ಮಹಾರಾಜ ಟ್ರೋಫಿ ನಡೆಯುತ್ತಿದ್ದು. ಬೆಂಗಳೂರು ಬ್ಲಾಸ್ಟರ್ಸ್,  ಮೈಸೂರು ವಾರಿಯರ್ಸ್, ಹುಬ್ಬಳ್ಳಿ  ಟೈಗರ್ಸ್, ಗುಲ್ಬರ್ಗ ಮೈಸ್ಟಿಕ್ಸ್,  ಮಂಗಳೂರು  ಡ್ರ್ಯಾಗನ್ಸ್, ಹಾಗೂ ಶಿವಮೊಗ್ಗ ಲಯನ್ಸ್ ಸೇರಿದಂತೆ  ಆರು ತಂಡಗಳು  ಸ್ಪರ್ಧಿಸಲಿವೆ.

For Latest News Updates, Join Our Whatsapp Community🚩
RELATED ARTICLES

Most Popular