HomeCrimeಕರೆಂಟ್ ಹೋಗಿದ್ದನ್ನೇ ದುರ್ಬಳಕೆ ಮಾಡಿಕೊಂಡ ನೆರೆಮನೆಯಾತ; ಗೃಹಿಣಿ ಮೇಲೆ ಅತ್ಯಾಚಾರ

ಕರೆಂಟ್ ಹೋಗಿದ್ದನ್ನೇ ದುರ್ಬಳಕೆ ಮಾಡಿಕೊಂಡ ನೆರೆಮನೆಯಾತ; ಗೃಹಿಣಿ ಮೇಲೆ ಅತ್ಯಾಚಾರ

ಕರೆಂಟ್ ಹೋದ ಸಂದರ್ಭದಲ್ಲಿ ಲೈಟ್ ಆಫ್ ಆಗಿ ಕತ್ತಲು ಆವರಿಸಿಕೊಂಡಿದ್ದನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿಯೊಬ್ಬ ಗೃಹಿಣಿ ಮೇಲೆ ಆಕೆಯ ಮನೆಯಲ್ಲೇ ಅತ್ಯಾಚಾರವೆಸಗಿರುವ ಹೀನ ಕೃತ್ಯ ಉತ್ತರ ಪ್ರದೇಶದ ಬದೋಯಿ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗದಾಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಬದೋಯಿಯ 34 ವರ್ಷದ ಮಹಿಳೆ ತನ್ನ ಮನೆಯಲ್ಲಿದ್ದಾಗ ಕರೆಂಟ್ ಹೋದ ಪರಿಣಾಮ ಕತ್ತಲು ಆವರಿಸಿತ್ತು. ಈ ಸಂದರ್ಭದಲ್ಲಿ ಪಕ್ಕದ ಮನೆಯ 32 ವರ್ಷದ ಕಾಂಚು ಎಂಬಾತ ಅಕ್ರಮವಾಗಿ ಈಕೆಯ ಮನೆ ಪ್ರವೇಶಿಸಿ ಮಂಚದ ಮೇಲೆ ಮಲಗಿದ್ದಾನೆ. ಮಹಿಳೆ ಕೂಡ ಆತ ತನ್ನ ಪತಿಯೆಂದು ಭಾವಿಸಿದ್ದು, ಆದರೆ ಕರೆಂಟ್ ಬಂದ ವೇಳೆ ಈತನನ್ನು ಕಂಡು ಕಿರುಚಿಕೊಂಡಿದ್ದಾರೆ.

ತಕ್ಷಣವೇ ಆಗಮಿಸಿದ ಮಹಿಳೆಯ ಕುಟುಂಬಸ್ಥರು ಆರೋಪಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಮಹಿಳೆ ಗೋಪಾಲ್ ಗಂಜ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಕೋರ್ಟ್ ಆದೇಶದಂತೆ ತನಿಖೆ ಕೈಗೊಳ್ಳಲಾಗಿದೆ. ಇದರ ಮಧ್ಯೆ ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular